ಚಿತ್ರದುರ್ಗ : ನಗರದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆ ವೇಳೆ 6 ಜನ ಬಾಂಗ್ಲಾ ನುಸುಳುಕೋರರು ಪತ್ತೆಯಾಗಿದ್ದಾರೆ. ಇದೇ ವೇಳೆ, ಗ್ರಾಮೀಣ ಪ್ರದೇಶದಲ್ಲಿ 11 ಶಂಕಿತ ನುಸುಳುಕೋರರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ಮುಂದುವರಿದಿದೆ.
ಬಹುತೇಕರ ಬಳಿ ಪಶ್ಚಿಮ ಬಂಗಾಳದ ಆಧಾರ್ ಕಾರ್ಡ್ ಪತ್ತೆಯಾಗಿವೆ. ಖಾಸಗಿ ಗಾರ್ಮೆಂಟ್ಸ್ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಾಂಗ್ಲಾದೇಶ ಮೂಲದ ಶೇಕ್ ಶೈಪುರ್ ರೆಹಮಾನ್ ಮತ್ತು ಸುಮನ್ ಹುಸೇನ್ ಎನ್ನುವವರನ್ನು ಬಂಧಿಸಲಾಗಿದ್ದು ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಇವರು ನೀಡಿದ ಮಾಹಿತಿ ಮೇರೆಗೆ ಮತ್ತೆ ನಾಲ್ವರನ್ನು ಬಂಧಿಸಲಾಗಿದೆ. ಚಿತ್ರದುರ್ಗ ಡಿವೈಎಸ್ಪಿ ದಿನಕರ್, ಸಿಪಿಐ ಗುಡ್ಡಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ವಶಕ್ಕೆ ಪಡೆಯಲಾಗಿದ್ದ ಒಟ್ಟು 17 ಜನರ ಪೈಕಿ 6 ಮಂದಿ ಬಾಂಗ್ಲಾದೇಶದ ಪ್ರಜೆಗಳು ಎನ್ನುವುದು ಖಚಿತವಾಗಿದೆ. ಉಳಿದ 11 ಜನ ಶಂಕಿತರು ಗ್ರಾಮೀಣ ಭಾಗದ ಪೊಲೀಸರ ವಶದಲ್ಲಿದ್ದು, ಚಿತ್ರದುರ್ಗ ಎಸ್.ಪಿ.ರಂಜಿತ್ ಬಂಡಾರು ನೇತೃತ್ವದಲ್ಲಿ ತೀವ್ರ ವಿಚಾರಣೆ ಮುಂದುವರೆದಿದೆ.