ಗಯಾ : ಆಟಿಕೆ ವಸ್ತು ಎಂದು ತಿಳಿದು ಒಂದು ವರ್ಷದ ಬಾಲಕನೊಬ್ಬ ಹಾವನ್ನು ಕಚ್ಚಿ ಸಾಯಿಸಿದ ವಿಲಕ್ಷಣ ಘಟನೆ ಬಿಹಾರದ ಗಯಾ ಜಿಲ್ಲೆ ಯಲ್ಲಿಜಮುಹರ್ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ವಿಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಡೆದಿದ್ದು ಏನು ?
ಕಳೆದ ವಾರ ಒಂದು ವರ್ಷದ ಬಾಲಕನೊಬ್ಬ ತಮ್ಮ ಮನೆಯ ಮಹಡಿ ಮೇಲೆ ಆಟವಾಡುತ್ತಿದ್ದಾಗ ಆಟಿಕೆ ವಸ್ತುವೆಂದುಕೊಂಡು ಹಾವನ್ನು ಹಿಡಿದು ಬಾಯಲ್ಲಿಟ್ಟುಕೊಂಡು ಕಚ್ಚಿದ್ದಾನೆ. ಹಾವು ಸಾವನ್ನಪ್ಪಿದೆ. ಬಾಲಕ ಹಾವನ್ನು ಬಾಯಲ್ಲಿಟ್ಟು ಕೊಂಡು ಅಗೆಯುವುದನ್ನು ನೋಡಿದ ಮಗುವಿನ ತಾಯಿ ಹಾವನ್ನು ಬಾಯಿಯಿಂದ ತೆಗೆದುಹಾಕಿ ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಮಗುವನ್ನು ಪರೀಕ್ಷಿಸಿ, ಮಗು ಸುರಕ್ಷಿತವಾಗಿದೆ, ಯಾವುದೇ ಪ್ರಾಣಾಪಾಯ ವಿಲ್ಲವೆಂದು ತಿಳಿಸಿದ್ದಾರೆ.