Home ರಾಜ್ಯ ಸುದ್ದಿಮನ್ ಕಿ ಬಾತ್ ಅರ್ಥಪೂರ್ಣ ಕಾರ್ಯಕ್ರಮ : ಬಿ.ವೈ.ವಿಜಯೇಂದ್ರ

ಮನ್ ಕಿ ಬಾತ್ ಅರ್ಥಪೂರ್ಣ ಕಾರ್ಯಕ್ರಮ : ಬಿ.ವೈ.ವಿಜಯೇಂದ್ರ

by Kundapur Xpress

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನ್-ಕಿ- ಬಾತ್ ಬಹಳ ಅರ್ಥಪೂರ್ಣ ಮತ್ತು ವಿಶಿಷ್ಟವಾದುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ಲೇಷಿಸಿದರು. ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ.ರಾಮಮೂರ್ತಿ ಅವರ ಜಯನಗರದ ನಿವಾಸದಲ್ಲಿ ಭಾನುವಾರ ಮನ್-ಕಿ-ಬಾತ್ ಕಾರ್ಯಕ್ರಮವನ್ನು ಅವರು ವೀಕ್ಷಿಸಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ವಿವಿಧ ಕ್ಷೇತ್ರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ಮಾತನಾಡಿದ್ದಾರೆ. ಮಾ.8ರಂದು ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಸಾಧಕ ಮಹಿಳೆಯರ ಕುರಿತು, ವನ್ಯಮೃಗಗಳ ಸಂರಕ್ಷಣೆ ಕುರಿತು ಮಾತನಾಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಯುವಜನರ ಸಾಧನೆ ಕುರಿತು ಪ್ರೇರಣಾದಾಯಕ ಮಾತುಗಳನ್ನಾಡಿದ್ದಾರೆ ಎಂದರು.

ಈಗ ಪರೀಕ್ಷಾ ಸಮಯ ಎಲ್ಲ ಪರೀಕ್ಷಾರ್ಥಿಗಳು ಒತ್ತಡವಿಲ್ಲದೆ ಪರೀಕ್ಷೆ ಎದುರಿಸಬೇಕೆಂದು ಕಿವಿಮಾತು ಹೇಳಿದ್ದಾರೆ. ಇದೊಂದು ವಿಶಿಷ್ಟ ಕಾರ್ಯಕ್ರಮ. ಕರ್ನಾಟಕದ ಬಗ್ಗೆ 2 ಅಂಶಗಳನ್ನು ಉಲ್ಲೇಖಿಸಿದ್ದಾರೆ. ಸಾಧಕ ಕ್ರೀಡಾಪಟು ಕುರಿತು ಮಾತನಾಡಿದ್ದಾರೆ. ಸೋಲಿಗರ ಸಮುದಾಯದ ಹುಲಿ ಸಂರಕ್ಷಣೆ ಕುರಿತು ನೆನಪಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರು, ಪಾಲಿಕೆ ಮಾಜಿ ಸದಸ್ಯರು, ಜಿಲ್ಲಾ ಪದಾಧಿಕಾರಿಗಳು, ಪಕ್ಷದ ಮುಖಂಡರು ಭಾಗವಹಿಸಿದ್ದರು.

Related Articles