Home » ಇಂದು ಉಪಚುನಾವಣೆ : ಬಿಗಿ ಭದ್ರತೆ ಸಕಲ ಸಿದ್ದತೆ
 

ಇಂದು ಉಪಚುನಾವಣೆ : ಬಿಗಿ ಭದ್ರತೆ ಸಕಲ ಸಿದ್ದತೆ

by Kundapur Xpress
Spread the love

ಬೆಂಗಳೂರು : ರಾಜ್ಯದ ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. ಈ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ಶಿಗ್ಗಾಂವಿಯಲ್ಲಿ 241, ಸಂಡೂರು 253, ಚನ್ನಪಟ್ಟಣ ಕ್ಷೇತ್ರದಲ್ಲಿ 276 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ 5 ಸಖಿ ಮತಗಟ್ಟೆಗಳನ್ನು ಸ್ಥಾಪಿಸ ಲಾಗಿದ್ದು, ಶಿಗ್ಗಾಂವಿಯಲ್ಲಿ 2,37,669, ಸಂಡೂರಿ ನಲ್ಲಿ 2,36,405 ಮತ್ತು ಚನ್ನಪಟ್ಟಣದಲ್ಲಿ 2,32,996 ಮತದಾರರಿದ್ದಾರೆ.

ಬೆಳಗ್ಗೆ 7.00 ಗಂಟೆಯಿಂದ ಸಂಜೆ 6.00ರವರೆಗೂ ಮತದಾನ ನಡೆಯಲಿದ್ದು ಮತದಾನಕ್ಕೆ ಚುನಾ ವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ಪಡೆದುಕೊಂಡ ಚುನಾವಣಾ ಸಿಬ್ಬಂದಿ ಮಂಗಳವಾರ ಸಂಜೆ ವೇಳೆಗೆ ಮತಗಟ್ಟೆ ಕೇಂದ್ರಗಳನ್ನು ತಲುಪಿಸಿದರು. ಮೂರು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಪಾರ ಮೌಲ್ಯದ ಮದ್ಯ, ಮಾದಕ ವಸ್ತು ಸೇರಿದಂತೆ ಉಡುಗೊರೆ ವಸ್ತುಗಳನ್ನು ಆಯೋಗ ವಶಪಡಿಸಿಕೊಂಡಿದ್ದು ಇದರಲ್ಲಿ ಚನ್ನಪಟ್ಟಣದಲ್ಲಿ ವಶಪಡಿಸಿಕೊಂಡ ಮೌಲ್ಯವೇ ಅಧಿಕವಾಗಿದೆ.

   

Related Articles

error: Content is protected !!