Home » ಅಭಿವೃದ್ದಿಯ ದಿಕ್ಕು ಬದಲಿಸಿದ ಗ್ಯಾರಂಟಿ ಯೋಜನೆ
 

ಅಭಿವೃದ್ದಿಯ ದಿಕ್ಕು ಬದಲಿಸಿದ ಗ್ಯಾರಂಟಿ ಯೋಜನೆ

ಸಿಎಂ ಸಿದ್ದರಾಮಯ್ಯ

by Kundapur Xpress
Spread the love

ಬೆಂಗಳೂರು : ಕರ್ನಾಟಕ ರಾಜ್ಯವು ಈಗ ತಲಾದಾಯದಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಪುನರುಚ್ಚರಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಗೆ ಪ್ರೇರಣೆಯಾಗುವ ಮೂಲಕ ಅಭಿವೃದ್ಧಿಯ ದಿಕ್ಕನ್ನೇ ಬದಲಿಸಿವೆ ಎಂದು ಪ್ರತಿಪಾದಿಸಿದರು.

ತಲಾದಾಯದಲ್ಲಿ ರಾಜ್ಯ ಕಳೆದ ಹತ್ತು ವರ್ಷಗಳಲ್ಲಿ ಶೇ.101ರಷ್ಟು ಪ್ರಗತಿ ಸಾಧಿಸಿದೆ. 2013-14 ರಲ್ಲಿ 1,01,858 ರೂ.ಗಳಷ್ಟಿದ್ದ 2024-25ರಲ್ಲಿ 2,04,605 ರೂ. ತಲುಪಿದೆ ಎಂದರು.

ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಶುಕ್ರವಾರ 79ನೇ ಸ್ವಾತಂತ್ರೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಶೇ.10ರಷ್ಟಿರುವ ಶ್ರೀಮಂತರ ಬಳಿ ಶೇ.80ರಷ್ಟು ಸಂಪತ್ತು ಶೇಖರಣೆಯಾಗಿದೆ. ಆದರೆ, ಈ ಶ್ರೀಮಂತರು ಶೇ.3ರಷ್ಟು ಮಾತ್ರ ಜಿಎಸ್‌ಟಿ ಪಾವತಿಸುತ್ತಿದ್ದರೆಂದು ಅಧ್ಯಯನಗಳು ಹೇಳುತ್ತಿವೆ. ಹೊಟ್ಟೆ-ಬಟ್ಟೆಗೆ ಶೇ.90ರಷ್ಟು ಜನ ಶೇ.97ರಷ್ಟು ಪಾವತಿಸುತ್ತಿದ್ದಾರೆ ಎಂದರು.

 

Related Articles

error: Content is protected !!