Home » ಯಾವುದೇ ಕಾರಣಕ್ಕೂ ಗ್ಯಾರೆಂಟಿ ಯೋಜನೆ ನಿಲ್ಲಲ್ಲ
 

ಯಾವುದೇ ಕಾರಣಕ್ಕೂ ಗ್ಯಾರೆಂಟಿ ಯೋಜನೆ ನಿಲ್ಲಲ್ಲ

ಸಿ ಎಂ ಸಿದ್ದರಾಮಯ್ಯ

by Kundapur Xpress
Spread the love

ಮೈಸೂರು :  ನಾವುಓಟಿಗಾಗಿ ಗ್ಯಾರಂಟಿಯೋಜನೆಗಳನ್ನು ಜಾರಿಗೆ ತಂದಿಲ್ಲ. ಹೀಗಾಗಿ, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲು ವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶುಕ್ರವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ಈ ಬಗ್ಗೆ ಪುನರ್‌ಪರಿಶೀಲನೆ ಮಾಡುವ ಪ್ರಶ್ನೆಯೇ ಇಲ್ಲ. ಬಡವರಿಗಾಗಿ ನಾವು ಗ್ಯಾರಂಟಿ ಯೋ ಜನೆಗಳನ್ನು ಜಾರಿಗೆ ತಂದಿದ್ದೇವೆ. ನಮಗೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾ ಗಿರಬಹುದು. ಆದರೆ, ಮತಗಳಿಕೆ ವಿಚಾರ ದಲ್ಲಿ ಶೇ.13ರಷ್ಟು ಹೆಚ್ಚಾಗಿದೆ. ಮೈಸೂರಿನಲ್ಲಿ ಸೋತಿರುವುದು ಸತ್ಯ. ಆದರೆ, ಚಾಮರಾಜ ನಗರದಲ್ಲಿ ಗೆದ್ದಿದ್ದೇವೆ ಎಂದರು.

ಸೋಲಿಗೆ ಕಾರಣವನ್ನು ಮಾಧ್ಯಮದವರ ಮುಂದೆಹೇಳುವುದಿಲ್ಲ. ಪಕ್ಷದಹೈಕಮಾಂಡ್ ಗೆ ನಾನು ಹೇಳುತ್ತೇನೆ. ಈ ಹಿಂದೆ ಒಂದೇ ಸ್ಥಾನದಲ್ಲಿ ಗೆದ್ದಿದ್ದೇವು. ಈ ಬಾರಿ ರಾಜ್ಯದಲ್ಲಿ 9 ಸ್ಥಾನ ಗೆದ್ದಿದ್ದೇವೆ ಎಂದು ಹೇಳಿದರು.

 

   

Related Articles

error: Content is protected !!