ಶಿಗ್ಗಾಂವಿ: ಭಾರತೀಯರು ಉದಾರಿಗಳು, ಇಲ್ಲಿ ಎಲ್ಲರಿಗೂ ಇರಲು ಅವಕಾಶ ಇದೆ. ಆದರೆ ಷರಿಯಾ ಕಾನೂನಿಗೆ ಅವಕಾಶ ನೀಡಲು ನಾವು ಬಿಡುವುದಿಲ್ಲ ಎಂದು ವಿಪ ಸದಸ್ಯ ಸಿ.ಟಿ. ರವಿ ಹೇಳಿದರು. ಶಿಗ್ಗಾಂವಿಯಲ್ಲಿ ಬಿಜೆಪಿ ವತಿಯಿಂದ ವೆಕ್ಸ್ ವಿರುದ್ಧ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ವಕ್ಸ್ ಮೂಲಕ ಲ್ಯಾಂಡ್ ಜಿಹಾದ್ ಮಾಡಲು ನಾವು ಬಿಡುವುದಿಲ್ಲ. ನಮ್ಮ ಪೂರ್ವಿಕರ ಹೋರಾಟದ ಫಲವಾಗಿ ಇಂದು ನಾವು ಈ ದೇಶದಲ್ಲಿ ಇನ್ನೂ ಉಸಿರಾಡುತ್ತಿದ್ದೇವೆ. ಅದನ್ನು ಅರಿತು ಇಂದು ನಾವು ಬದುಕಬೇಕಿದೆ. ಸಿದ್ದರಾಮಯ್ಯ, ಜಮೀರ್ ಅಹಮದ್ ಗೆ ಷರಿಯಾ ಮುಖ್ಯವೋ ಅಥವಾ ಸಂವಿಧಾನ ಮುಖ್ಯವೋ ? ಸಂವಿಧಾನ ಮುಖ್ಯ ಅನ್ನುವುದಾದರೆ ಷರಿಯಾ ಕಾನೂನು ನಡೆಯಲು ನಾವು ಬಿಡುವುದಿಲ್ಲ ಎಂದರು.