Home » ಗ್ಯಾರಂಟಿಗೆ ದಲಿತರ ಮೀಸಲು ಹಣ
 

ಗ್ಯಾರಂಟಿಗೆ ದಲಿತರ ಮೀಸಲು ಹಣ

by Kundapur Xpress
Spread the love

ಬೆಂಗಳೂರು : ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗಳಿಗೆ ಬಳಸುವ ಮೂಲಕ ಸರ್ಕಾರ ದಲಿತರಿಗೆ ಅನ್ಯಾಯ ಮಾಡಿದೆ. ಸರ್ಕಾರದ ತಪ್ಪುಗಳನ್ನು ಜನರ ಮುಂದಿಡಲು ಸಂಘಟಿತ ಹೋರಾಟ ಮಾಡುತ್ತೇವೆ. ಸಮುದಾಯದ ಪರ ಸಂಘಟಿತ ಹೋರಾಟಕ್ಕೆ ಬಿಜೆಪಿ ಬೆಂಬಲವಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಎಸ್‌ಪಿಎಸ್‌ಪಿ -ಟಿಎಸ್ಸಿ ಅನುದಾನ ದುರ್ಬಳಕೆಯ ಕುರಿತು ಬಿಜೆಪಿ ನೇತೃತ್ವದಲ್ಲಿ ರಾಜ್ಯದ ದಲಿತ ಸಂಘಟನೆಗಳ ದುಂಡು ಮೇಜಿನ ಸಭೆ ಭಾನುವಾರ ಶಾಸಕರ ಭವನದಲ್ಲಿ ನಡೆಯಿತು

ಬಳಿಕ ಮಾತನಾಡಿ ಛಲವಾದಿ ನಾರಾಯಣಸ್ವಾಮಿ, ಎಸ್‌ಸಿಎಸ್ ಪಿ-ಟಿಎಸ್‌ಪಿ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಮತ್ತು ಬೇರೆ ಯೋಜನೆಗಳಿಗೆ ವರ್ಗಾವಣೆ ಮಾಡಿಕೊಂಡು ದಲಿತರಿಗೆ ವಂಚನೆ ಮಾಡಿರುವ ಬಗ್ಗೆ ದಲಿತ ಸಮುದಾಯಗಳ ಪರವಾಗಿ ಬಿಜೆಪಿ ಕೈಗೊಂಡಿರುವ ಹೋರಾಟದ ಕುರಿತು ದಲಿತ ಸಂಘಟನೆಗಳ ಸಭೆ ಕರೆಯಲಾಗಿತ್ತು. ಇದರಲ್ಲಿ ರಾಜಕೀಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಭೆಗೆ 80 ರಿಂದ 90 ಸಂಘಟನೆಗಳು ಸಭೆಗೆ ಬಂದಿವೆ ಸರ್ಕಾರ ದಲಿತ ಸಂಘನೆಗಳ ಮಾತು ಕೇಳುತ್ತಿಲ್ಲ. ಸರ್ಕಾರ 7ಸಿ ಯಲ್ಲಿ ವಂಚನೆ ಮಾಡುತ್ತಿರುವುದನ್ನು ಬಿಟ್ಟು ದಲಿತರ ಶ್ರೇಯೋಭಿವೃದ್ಧಿಗೆ ಆ ಹಣ ಬಳಕೆ ಮಾಡಿದರೆ ಯಾರ ಹೋರಾಟವು ಇಲ್ಲ ನೀವು ವಂಚನೆ ಮಾಡಿದರೆ ಹೋರಾಟ ಇರುತ್ತದೆ. ಬರುವ ಬಜೆಟ್‌ನಲ್ಲಿ ಸರ್ಕಾರ ದಲಿತರ ಹಣವನ್ನು ಯಾವುದೇ ಕಾರಣಕ್ಕೂ ಅನ್ಯ ಬಳಕೆ ಮಾಡಬಾರದು. ಮಾಡಿದರೆ ಕಾನೂನಾತ್ಮಕ ಹೋರಾಟ ಮೂಲಕ ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸಲು ನಾವೆಲ್ಲರೂ ಸಿದ್ದರಾಗಿದ್ದೇವೆ ಎಂದರು

 

Related Articles

error: Content is protected !!