105
ಕಾಪು : ಸಂಪೂರ್ಣ ಶಿಲಾಮಯವಾಗಿ ನವೀಕರಿಸಲಾದ ಉಡುಪಿ ಜಿಲ್ಲೆ ಕಾವು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಮಾರಿಯಮ್ಮ ಬ್ರಹ್ಮಕಲಶೋತ್ಸವಕ್ಕೆ ತಮ್ಮ ಪತ್ನಿ ಹೆಸರಲ್ಲಿ 9,99,999 ಮೌಲ್ಯದ ಸ್ವರ್ಣ ಕಲಶ ಅರ್ಪಿಸಿದರು. ಭಾನುವಾರ ಬೆಳಗ್ಗೆ 11.05ಕ್ಕೆ ನೂತನ ಗುಡಿಯಲ್ಲಿ ಮಾರಿಯಮ್ಮ ಮತ್ತು ಉಚ್ಚಂಗಿದೇವಿಯರನ್ನು ಸ್ವರ್ಣ ಗದ್ದುಗೆ ಮೇಲೆ ಪ್ರತಿಷ್ಠಾಪನೆ ಮಾಡಲಾಯಿತು.

