137
ವಿಜಯವಾಡ : ದಕ್ಷಿಣ ಭಾರತ ರಾಜ್ಯಗಳ ಜನಸಂಖ್ಯೆ ಇಳಿಕೆ ಬಗ್ಗೆ ಹಿಂದೊಮ್ಮೆ ಕಳವಳ ವ್ಯಕ್ತಪಡಿಸಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಸರ್ಕಾರ ಇದೀಗ ಹೆಚ್ಚು ಮಕ್ಕಳನ್ನು ಹೊಂದುವಂತೆ ಪರಿವಾರಗಳನ್ನು ಪ್ರೋತ್ಸಾಹಿಸಲು ಆರ್ಥಿಕ ಬೆಂಬಲ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತವಿರುವ ರಾಜ್ಯದ ಫಲವತ್ತತೆ ಹೆಚ್ಚಬೇಕು. ಆದ್ದರಿಂದ ಇನ್ನು ಪ್ರತಿ ಪರಿವಾರವನ್ನು ಒಂದು ಘಟಕವೆಂದು ಪರಿಗಣಿಸಿ, ಅದಕ್ಕೆ ಆರ್ಥಿಕ ಪ್ರೋತ್ಸಾಹ ನೀಡಲಾಗುವುದು. ಇದೊಂದು ಹೂಡಿಕೆಯಾಗಿದೆ. ಕುಟುಂಬ ದೊಡ್ಡದಾದಂತೆ ಪ್ರೋತ್ಸಾಹ ಧನವೂ ‘ಹೆಚ್ಚುವುದು’ ಎನ್ನುವ ಮೂಲಕ ಪರಿವಾರ ವಿಸ್ತರಣೆಗೆ ಪರೋಕ್ಷವಾಗಿ ಕರೆ ನೀಡಿದರು.

