ಬೆಂಗಳೂರು :ಮದುವೆ ಹೆಸರಿನಲ್ಲಿ ನಾಟಕವಾಡಿ ಗಂಡನ ಮನೆಯ ಹಣ, ಚಿನ್ನಾಭರಣ ಲೂಟಿ ಮಾಡಿಕೊಂಡು ಪರಾರಿಯಾಗುವ ಗ್ಯಾಂಗ್ ಒಂದು ವರ್ಷಕ್ಕೂ ಹೆಚ್ಚು ಕಾಲ, ಅವಳು ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಳು. ಲೂಟಿ ಮಾಡುವ ವಧು ಬಂಧಿಸಿದ ಪೊಲೀಸರಿಗೆ ನಗು ಮುಖದ ಆರೋಪಿ ಕಾಜಲ್ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಸಿಮ್ ಕಾರ್ಡ್, ಐಡೆಂಟಿಟಿಯನ್ನು ಸಿನಿಮಾ ಶೈಲಿಯಲ್ಲಿ ಬದಲಾಯಿಸಿಕೊಂಡು ಊರಿಂದ ಊರಿಗೆ ಓಡಾಡುತ್ತಿದ್ದಳು. ನೋಡಲು ಸುಂದರವಾದ ಈಕೆಯನ್ನು ಹಿಂದಿ ಭಾಷೆಯಲ್ಲಿ ಲೂಟೇರಿ ದುಲ್ಹನ್ ಅಂತ ಕರೆಯುತ್ತಾರೆ. ಅಂದರೇ, ಲೂಟಿ ಮಾಡುವ ವಧು ಎಂದರ್ಥ. ಮದುವೆಯಾಗಿ ಗಂಡನ ಮನೆಯಿಂದ ಹಣ, ಚಿನ್ನಾಭರಣವನ್ನು ಲೂಟಿ ಮಾಡಿಕೊಂಡು ಪರಾರಿಯಾಗುವ ಹೆಣ್ಣು ಎಂದರ್ಥ. ಮದುವೆಯ ಪವಿತ್ರ ಬಂಧನವನ್ನು ವಂಚನೆಯ ಸಾಧನವನ್ನಾಗಿ ಮಾಡಿಕೊಂಡಿದ್ದಳು. ಈಕೆಯೇ ಕಾಜಲ್. ಈಕೆ ಮೂಲತಃ ಉತ್ತರ ಪ್ರದೇಶದ ಮಥುರಾದ ಗೋವರ್ಧನ್ ಪ್ರದೇಶದವಳು. ತನ್ನ ತಂದೆ, ತಾಯಿ ಹಾಗೂ ಸಹೋದರಿ ಜೊತೆ ಸೇರಿ ಮದುವೆಯಾಗದ ಹುಡುಗರನ್ನು ಹಣದಾಸೆಗಾಗಿ ಮದುವೆಯಾಗಿ ವಂಚಿಸುವುದೇ ಈಕೆಯ ಕಾಯಕ.

