Home » ಕಿಚ್ಚ ಸುದೀಪ್‌ ತಾಯಿ ನಿಧನ
 

ಕಿಚ್ಚ ಸುದೀಪ್‌ ತಾಯಿ ನಿಧನ

by Kundapur Xpress
Spread the love

ಬೆಂಗಳೂರು : ಖ್ಯಾತ ಚಿತ್ರನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜ (80 ವರ್ಷ) ಭಾನುವಾರ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಶನಿವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಜೆಪಿನಗರದಲ್ಲಿರುವ ಸುದೀಪ್ ಅವರ ನಿವಾಸದಲ್ಲಿ ಸರೋಜ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ಅಂತಿಮ ದರ್ಶನ ಪಡೆದರು.ಸಾವಿರಾರು ಸಂಖ್ಯೆಯಲ್ಲಿಸುದೀಪ್ ಅವರ ಅಭಿಮಾನಿಗಳು ನೆರೆದಿದ್ದರು.

ಪಾರ್ಥಿವ ಶರೀರದ ಬಳಿಯೇ ದುಃಖಿತರಾಗಿ ಕಿಚ್ಚ ಸುದೀಪ್ ನಿಂತಿದ್ದರು. ಕುಟುಂಬ ವರ್ಗದ ನೋವನ್ನು ಕಂಡು ಬಂಧು ಬಳಗ, ಅಭಿಮಾನಿ ಸಮೂಹ ಕಣ್ಣೀರುಗರೆದಿದ್ದು ಕಂಡುಬಂತು. ಸಂಜೆ 6 ಗಂಟೆ ನಂತರ ಜೆಪಿ ನಗರದ ಸುದೀಪ್ ಅವರ ನಿವಾಸದಿಂದ ಮೆರವಣಿಗೆ ಮೂಲಕ ವಿಲ್ಸನ್ ಗಾರ್ಡನ್ ಚಿತಾಗಾರಕ್ಕೆ ಮೃತ ದೇಹವನ್ನು ತರಲಾಯಿತು. ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು

   

Related Articles

error: Content is protected !!