Home » ಧರ್ಮಸ್ಥಳ ವಿರುದ್ದ ಪಿತೂರಿ ಬಯಲು
 

ಧರ್ಮಸ್ಥಳ ವಿರುದ್ದ ಪಿತೂರಿ ಬಯಲು

ಕಳಚಿತು ಸಂಚಿನ ಮುಸುಕು

by Kundapur Xpress
Spread the love

ಬೆಳ್ತಂಗಡಿ  : ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ನೂರಾರು ಅನಾಮಧೇಯ ಮಹಿಳೆಯರ ಶವಗಳನ್ನು ನಾನು ಹೂತಿದ್ದೆ. ಈ ಕೃತ್ಯದ ಹಿಂದೆ ಪ್ರಭಾವಿಗಳಿದ್ದರು ಎಂದು ಅನಾಮಿಕ ಮುಸುಕುಧಾರಿ ವ್ಯಕ್ತಿ ಆರೋಪಿಸಿದ್ದ ಪ್ರಕರಣ ಭಾರೀ ತಿರುವು ಪಡೆದುಕೊಂಡಿದೆ. ಈತನನ್ನು ಶನಿವಾರ ನಸುಕಿನಲ್ಲಿ ಎಸ್‌ಐಟಿ ತಂಡ ಬಂಧಿಸಿದ್ದು, 10 ದಿನ ವಿಚಾರಣೆಗಾಗಿ ತನ್ನ ವಶಕ್ಕೆ ತೆಗೆದುಕೊಂಡಿದೆ. ಹೀಗಾಗಿ ಪ್ರಕರಣದ ಹಿಂದೆ ಇನ್ನೂ ಯಾರಿದ್ದಾರೆ ಎಂಬುದು ಶೀಘ್ರದಲ್ಲೇ ಬಯಲಾಗುವ ಸಾಧ್ಯತೆ ಸಿದ್ಧತೆ ಇದೆ.

ಇದರ ಜತೆಗೆ ಮುಸುಕುಧಾರಿಗೆ ನೀಡಿದ್ದ ಸಾಕ್ಷಿ ಸಂರಕ್ಷಣಾ ಭದ್ರತೆಯನ್ನು ತೆಗೆದು ಹಾಕಿ ಆತನನ್ನೇ ಆರೋಪಿಯನ್ನಾಗಿ ಹೆಸರಿಸಿದೆ. ಜತೆಗೆ ಆತನ ಹೆಸರು, ವಿಳಾಸವನ್ನು ಎಸ್‌ಐಟಿ (ವಿಶೇಷ ತನಿಖಾ ತಂಡ) ಮೊದಲ ಬಾರಿ ಬಹಿರಂಗಡಿಸಿದೆ. ಇದರೊಂದಿಗೆ ಮಾಸ್ಕ್ ಮ್ಯಾನ್ ತಲೆ ಬುರುಡೆ ಪುರಾಣ ಈಗ ಮತ್ತೊಂದು ಮಜಲು ಪಡೆದುಕೊಂಡಿದೆ.

 

Related Articles

error: Content is protected !!