Home » ಅಟೋ ಚಾಲಕನಿಂದ ಹಲ್ಲೆ : ಮಾಜಿ ಶಾಸಕ ನಿಧನ
 

ಅಟೋ ಚಾಲಕನಿಂದ ಹಲ್ಲೆ : ಮಾಜಿ ಶಾಸಕ ನಿಧನ

by Kundapur Xpress
Spread the love

ಬೆಳಗಾವಿ : ಕ್ಷುಲ್ಲಕ ಕಾರಣಕ್ಕೆ ನಗರದಲ್ಲಿ ಆಟೋ ಚಾಲಕನಿಂದ ಹಲ್ಲೆಗೊಳಗಾಗಿದ್ದ ಗೋವಾದ ಪೋಂಡಾ ಕ್ಷೇತ್ರದ ಮಾಜಿ ಶಾಸಕ ಲಾವೋ ಮಾಮಲೇದಾರ್ (69)  ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಲಾವೋ ಬೆಳಗ್ಗೆ ಖಡೇಬಜಾರ್‌ಬಳಿ ತೆರಳುತ್ತಿದ್ದ ವೇಳೆ ಲಾವೋ ಮಾಮಲೇದಾರ್‌ ಕಾರು ಆಟೋಗೆ ಸಣ್ಣದಾಗಿ ಸ್ಪರ್ಶ ಆಗಿತ್ತು. ಇದಾದ ಬಳಿಕ ಬೆಳಗಾವಿ ನಗರದ ಶ್ರೀನಿವಾಸ್ ಲಾಡ್ಜ್‌ಗೆ ಬಂದಿದ್ದರು. ಲಾಡ್ಜ್ ಬಳಿ ಬಂದ ಆಟೋ ಚಾಲಕ ಲಾವೋ ಅವರಿಗೆ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆ ನಂತರ ಲಾಡ್ಜ್ ಮೆಟ್ಟಿಲು ಹತ್ತುವ ವೇಳೆ ಲಾವೋ ಏಕಾಏಕಿ ಕುಸಿದು ಬಿದ್ದು ಹೃದಯಾಘಾತದಿಂದ ಆಗಿರುವ ಸಾವೋ ಎಂಬುವುದು ಇನ್ನಷ್ಟೇ ತಿಳಿಯಬೇಕಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾವೋ ಮಾಮಲೇದಾರ್‌ ಮೃತದೇಹವನ್ನು ಬಿಮ್ಸ್ ಆಸ್ಪತ್ರೆಗೆ ತರಲಾಗಿದೆ.

 

Related Articles

error: Content is protected !!