ಉಡುಪಿ : ಪ್ರಯಾಣಿಕರ ಅಧಿಕ ಒತ್ತಡದ ಕಾರಣ ಕಾರವಾರ- ಬೆಂಗಳೂರು ನಡುವೆ ಸಂಚರಿಸುವ ಬೆಂಗಳೂರು- ಕಾರವಾರ, ಎಕ್ಸ್ಪ್ರೆಸ್ ರೈಲಿಗೆ (ನಂ. 16595/16596) ತಾತ್ಕಾಲಿಕ ನೆಲೆಯಲ್ಲಿ ಮೂರು ಹೆಚ್ಚುವರಿ ಎಸಿ ಬೋಗಿಗಳನ್ನು ಸೇರ್ಪಡೆಗೊಳಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.
ನ.2 ರಿಂದ ಈ ರೈಲು ಎರಡು 3ಟಯರ್ ಎಸಿ ಬೋಗಿ ಹಾಗೂ ಒಂದು 2 ಟಯರ್ ಎಸಿ ಬೋಗಿಯೊಂದಿಗೆ ಸಂಚರಿಸಲಿದೆ. ಹೀಗಾಗಿ ಇದುವರೆಗೆ 14 ಬೋಗಿಗಳೊಂದಿಗೆ ಸಂಚರಿಸುತ್ತಿದ್ದ ಈ ರೈಲು, ಇನ್ನು ಒಟ್ಟು 17 ಬೋಗಿ ಗಳೊಂದಿಗೆ ಓಡಾಟ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ. ಕಾರವಾರದಿಂದ ಈ ರೈಲನ್ನು ತಾತ್ಕಾಲಿಕವಾಗಿ ಮಡಗಾಂವ್ ಜಂಕ್ಷನ್ ವರೆಗೆ ಓಡಿಸಲಾಗುತ್ತದೆ ಎಂದೂ ಕೊಂಕಣ ರೈಲ್ವೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.