139
ಬೆಂಗಳೂರು : ಚಿನ್ನದ ಬೆಲೆ ಏರಿಕೆ ಪರ್ವ ಮುಂದುವರೆದಿದ್ದು, 10 ಗ್ರಾಂ ಚಿನ್ನದ ದರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದೇ ದಿನ 1800 ರು. ಏರಿಕೆಯಾಗಿದೆ. ಈ ಮೂಲಕ 10 ಗ್ರಾಂ ಚಿನ್ನದ ದರ 1 ಲಕ್ಷದ ಗಡಿ ದಾಟಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ. ಬೆಂಗಳೂರಲ್ಲೂ 1 ಲಕ್ಷ ರು. ದಾಟಿದ್ದು, 99.5 ಶುದ್ಧತೆಯ ಚಿನ್ನದ ನ್ನದ ದರ ದರ 1,05,000 ರು.ಗೆ ಏರಿದೆ.
ಅಕ್ಷಯ ತೃತೀಯ ಸಮೀಪಿಸುತ್ತಿರುವ ಹಿನ್ನೆಲೆ ಹಾಗೂ ವಿವಾಹ ಋತುವಿನ ಕಾರಣ ಜೊತೆಗೆ ಜಾಗತಿಕ ಆರ್ಥಿಕತೆಯ ಅನಿಶ್ಚಿತತೆ ಯಿಂದ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಇದು ಬೆಲೆ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ

