Home » ಆರ್ಥಿಕ ಪತನದತ್ತ ಹಿಮಾಚಲ ಪ್ರದೇಶ
 

ಆರ್ಥಿಕ ಪತನದತ್ತ ಹಿಮಾಚಲ ಪ್ರದೇಶ

by Kundapur Xpress
Spread the love

ಶಿಮ್ಲಾ ; ಕಾಂಗ್ರೆಸ್ ಆಡಳಿತದ ಹಿಮಾಚಲಪ್ರದೇಶದಲ್ಲಿ ಗ್ಯಾರಂಟಿ ಯೋಜನೆಗಳು ಸರ್ಕಾರದ ಬೊಕ್ಕಸಕ್ಕೆ ತೀವ್ರ ಹೊರೆಯಾಗುತ್ತಿದ್ದು, ರಾಜ್ಯವನ್ನು ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕುವಂತೆ ಮಾಡಿರುವುದನ್ನು ಅಲ್ಲಿನ ಮುಖ್ಯಮಂತ್ರಿಯವರೇ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ ಈಗ ವಿದ್ಯುತ್ ಸಬ್ಸಿಡಿ ನಿಲ್ಲಿಸಲು ಚಿಂತನೆ ನಡೆಸುತ್ತಿದೆ. ಇದರ ಭಾಗವಾಗಿ ಸುಸ್ಟಿಯಲ್ಲಿರುವ ವಿದ್ಯುತ್ ಗ್ರಾಹಕರು ಸಬ್ಸಿಡಿಯನ್ನು ಬಿಟ್ಟುಕೊಡುವಂತೆ ಖುದ್ದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ನಾನು ಸಹ ಸಬ್ಸಿಡಿ ಬಿಟ್ಟುಕೊಡುತ್ತಿರುವುದಾಗಿ ಪ್ರಕಟಿಸಿದ್ದಾರೆ. ದಾಖಲೆಗಳು ಹೇಳುವಂತೆ, ಮುಖ್ಯಮಂತ್ರಿ ಸುಂದರ್ ಸುಖು ಹೆಸರಿನಲ್ಲೇ 6 ವಿದ್ಯುತ್ ಮೀಟರ್‌ಗಳಿದ್ದವು ಈ ಮೀಟರ್‌ಗಳ ಮೂಲಕ ಅವರು ತಿಂಗಳಿಗೆ 625 ರೂ.ಗಳಷ್ಟು ಸಬ್ಸಿಡಿ ಪಡೆಯುತ್ತಿದ್ದರು. ಈಗ ಹೊಸ ವರ್ಷದಿಂದ ನಾನು ಸಬ್ಸಿಡಿ ಬಿಟ್ಟುಕೊಡುವುದಾಗಿ ಸುಖು ತಿಳಿಸಿದ್ದಾರೆ.

 

Related Articles

error: Content is protected !!