Home » ಸೇನೆಗೆ ಬೆಂಬಲವಾಗಿ ಜೈಹಿಂದ್‌ ತಿರಂಗಾ ಯಾತ್ರೆ
 

ಸೇನೆಗೆ ಬೆಂಬಲವಾಗಿ ಜೈಹಿಂದ್‌ ತಿರಂಗಾ ಯಾತ್ರೆ

by Kundapur Xpress
Spread the love

ಬೆಂಗಳೂರು : ಪಾಕ್ ವಿರುದ್ಧ ‘ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆಗೆ ಬೆಂಬಲ ವಾಗಿ ರಾಜ್ಯ ಸರ್ಕಾರಶುಕ್ರವಾರ ಬೃಹತ್ ‘ಜೈ ಹಿಂದ್ ತಿರಂಗಾ ಯಾತ್ರೆ’ ನಡೆಸಿತು.

ಕೆ.ಆ‌ರ್.ವೃತ್ತದಿಂದ ಚಿನ್ನಸ್ವಾಮಿ ಕ್ರಿಕೆಟ್ ಮೈದಾ ನದ ಬಳಿಯ ಮಿನ್‌ ಸೈರ್‌ವರೆಗೆ ನಡೆದ ಈ. ಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ.ಶಿವಕುಮಾರ್ ಸೇರಿ ಹಲವು ಸಚಿವರು, ಕಾಂಗ್ರೆಸ್ ನಾಯಕರು, ಸಾವಿರಾರು ಸಾರ್ವಜನಿಕರು ಪಾಲ್ಗೊಂಡಿದ್ದರು.

ಕೆ.ಆ‌ರ್.ವೃತ್ತದಿಂದ ಆರಂಭವಾದ ತಿರಂಗಾ ಪಾದಯಾತ್ರೆ ಡಾ| ಬಿ.ಆರ್. ಅಂಬೇಡ್ಕರ್‌ ವೀಥಿ ವಿಧಾನ ಸೌಧ ಮುಂಭಾಗದಿಂದ ಸಾಗಿ ಮಿನ್‌ಸ್‌ಸ್ಟೇರ್‌ನಲ್ಲಿ ಅಂತ್ಯವಾಯಿತು. ಖಾಸಗಿ ಉದ್ದಿಮೆ ನೌಕರರು, ಸಂಘ-ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪಾಲ್ಗೊಂಡವರೆಲ್ಲರೂ ಕೈಯಲ್ಲಿ ತ್ರಿವರ್ಣ ಧ್ವಜವನ್ನಿಡಿದು, ಸೇನೆಗೆ ಜೈಕಾರ ಕೂಗುತ್ತಾ ಹೆಜ್ಜೆ ಹಾಕಿದರು. ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು.2 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಕೇಂದ್ರ ಹಾಗೂ ಭಾರತೀಯ ಸೇನಾ ಪಡೆಗಳಿಗೆ ಬೆಂಬಲವಾಗಿ ನಿಲ್ಲುವ ಸಂದೇಶ ರವಾನಿಸಿದರು. ಬೆಳಗಿನ ಹೊತ್ತು ಯಾತ್ರೆ ನಡೆದ ಪರಿಣಾಮ ವಿಧಾನಸೌಧ ಸುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

 

Related Articles

error: Content is protected !!