75
ಪೂರ್ಣಿಯಾ (ಬಿಹಾರ ): ಮತ ಅಧಿಕಾರ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ ಬಿಹಾರದ ಪೂರ್ಣಿಯಾ ಜಿಲ್ಲೆಯ ಅರಾರಿಯಾದ ಬೀದಿಗಳಲ್ಲಿ ಬುಲೆಟ್ ಬೈಕ್ ಸವಾರಿ ಮಾಡಿ ಗಮನ ಸೆಳೆದರು.
ಈ ವೇಳೆ ಯುವಕನೊಬ್ಬ ರಾಹುಲ್‌ಗೆ ಮುತ್ತಿಟ್ಟ ಘಟನೆ ನಡೆದಿದೆ. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ತಳ್ಳಿದರು. ಆತ ನುಗ್ಗಲು ಯತ್ನಿಸಿದಾಗ ಕಪಾಳಮೋಕ್ಷ ಮಾಡಿದರು

