ಬೆಂಗಳೂರು : ವಿವಾಹಿತೆಯರ ಸೌಂದರ್ಯ ಸ್ಪರ್ಧೆ ‘ಮಿಸೆಸ್ ಇಂಡಿಯಾ ಪ್ರೈಡ್ ಆಫ್ ನೇಷನ್-2024’ ಕಿರೀಟ ಡಾ.ಪ್ರಿಯಾ ಗೋಸ್ವಾಮಿ ಅವರಿಗೆ ಒಲಿದಿದೆ.
ಇತ್ತೀಚೆಗೆ ನವ ದೆಹಲಿಯಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಮದ್ದೂರಿನ ಡಾ.ಪ್ರಿಯಾ ಗೋಸ್ವಾಮಿ ಅವರು ಆಕರ್ಷಣೀಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಅಲ್ಲದೆ ಸೋಷಿಯಲ್ ಇನ್‌ಫ್ಲುಯೆನ್ಸರ್ ಗೌರವಕ್ಕೂ ಪಾತ್ರರಾಗಿದ್ದಾರೆ.
ವೃತ್ತಿಯಲ್ಲಿ ಪಶುಪಾಲನಾ ವೈದ್ಯೆಯಾಗಿರುವ ಡಾ.ಪ್ರಿಯಾ ಮೂಲತಃ ಪಂಜಾಬ್‌ನವರಾಗಿದ್ದು ಗೋವಾದಲ್ಲಿ ಬೆಳೆದವರು ಭಾರತೀಯ ಸೇನೆಯಲ್ಲಿರುವ ಇವರ ಪತಿ ಕರ್ನಲ್ ಸಂಜೀತ್ ಮಂಡ್ಯ ಜಿಲ್ಲೆಯ ಮದ್ದೂರಿನವರು ಕಳೆದೆರಡು ದಶಕಗಳಿಂದ ಡಾ.ಪ್ರಿಯಾ ಮದ್ದೂರಿನ ನಿವಾಸಿಯಾಗಿದ್ದಾರೆ.