ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ 3ನೇ ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಮೈದ ಬಿ.ಎಂ. ಮಲ್ಲಿಕಾರ್ಜುನಸ್ವಾಮಿಯನ್ನು ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಸೋಮವಾರ ಶಾಂತಿನಗರದ ಇಡಿ ತನಿಖಾ ಸಂಸ್ಥೆ ಕಚೇರಿಗೆ ಆಗಮಿಸಿದ ಮಲ್ಲಿಕಾರ್ಜುನ ಸ್ವಾಮಿ, ಸತತ 4 ತಾಸು ವಿಚಾರಣೆ ಎದುರಿಸಿದ್ದಾರೆ. ಮೈಸೂರು ಹೊರವಲಯದ ಕೆಸರೆ ಗ್ರಾಮದಲ್ಲಿರುವ 3.16 ಎಕರೆ ಜಮೀನನ್ನು ಭೂ ಮಾಲೀಕ ದೇವರಾಜು ಬಳಿ ಪಡೆದ ಮಲ್ಲಿಕಾರ್ಜುನ ಸ್ವಾಮಿ ತನ್ನ ಸೋದರಿ ಪಾರ್ವತಿಗೆ ಅದನ್ನು ಕುಂಕುಮ ರೂಪದಲ್ಲಿ ನೀಡಿರುವುದು ಸೇರಿದಂತೆ ಇತರೆ ಪ್ರಶ್ನೆಗಳನ್ನು ಸಂಗ್ರಹಿಸಿರುವ ಕೆಲ ದಾಖಲೆಗಳಿಗೆ ಸ್ಪಷ್ಟತೆ ನೀಡುವಂತೆ ಇ.ಡಿ. ಅಧಿಕಾರಿಗಳು ಕೇಳಿದ್ದರೆಂದು ಮೂಲಗಳು ತಿಳಿಸಿವೆ