ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50ರ ಅನುಪಾತದಲ್ಲಿ ನಡೆದಿರುವ ನಿವೇಶನ ಹಂಚಿಕೆಯ ಹಗರಣದ ಮಾಹಿತಿಗಳು ಈಗ ಒಂದೊಂದಾಗಿ ಬಹಿರಂಗವಾಗತೊಡಗಿವೆ. ಈಗ ಎರಡನೇ ಪಟ್ಟಿಯೊಂದು ಬಹಿರಂಗಗೊಂಡಿದ್ದು, ಅದರಲ್ಲಿ 928 ನಿವೇಶನಗಳ ಹಂಚಿಕೆಯ ಮಾಹಿತಿ ಬಯಲಾಗಿದೆ. ಈ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಸಿಎಂ ಆಪ್ತ ಹಿನಕಲ್ ಪಾಪಣ್ಣ ಹೆಸರು ಕೂಡಾ ಇದೆ
ಮಂಗಳವಾರ ವೈರಲ್ ಆಗಿರುವ ಎರಡನೇ ಪಟ್ಟಿಯಲ್ಲಿ ಪಾರ್ವತಿ ಸಿದ್ದರಾಮಯ್ಯಗೆ 14 ಸೈಟ್ ನೀಡಿರುವ ಮಾಹಿತಿ ಇದೆ. ಹಾಗೆಯೇ ಸಿಎಂ ಸಿದ್ದರಾಮಯ್ಯನವರ ಆಪ್ತ ಹಿನಕಲ್ ಪಾಪಣ್ಣರಿಗೆ ಬರೋಬರೀ 32 ಸೈಟ್ಗಳನ್ನು ನೀಡಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಅಲ್ಲದೇ ಮಹದೇವ್ ಎಂಬುವವರಿಗೆ 34, ದೀಪು ರಾಜೇಂದ್ರಗೆ 14, ಮಹೇಂದ್ರ ಎಂಬವರಿಗೆ 19 ಸೈಟ್ ನೀಡಲಾಗಿದೆ. ಇನ್ನೂ ಅಬ್ದುಲ್ ವಾಹಿದ್ಗೆ 14, ಎಂ.ರವಿಕುಮಾರ್ಗೆ 23 ಸೈಟ್, ಸುನೀತಾ ಬಾಯಿ ಎಂಬುವರಿಗೆ 12 ನಿವೇಶನ ನೀಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ