Home » ನಾಡಹಬ್ಬ ದಸರಾಗೆ ಚಾಲನೆ
 

ನಾಡಹಬ್ಬ ದಸರಾಗೆ ಚಾಲನೆ

by Kundapur Xpress
Spread the love

ಮೈಸೂರು : ನಾಡಿನ ಸಾಂಸ್ಕೃತಿಕ, ಧಾರ್ಮಿಕ ವೈಭವ ಸಾರುವ ವಿಶ್ವವಿಖ್ಯಾತ ಮೈಸೂರು ದಸರಾಗೆ ಗುರುವಾರ ವಿಧ್ಯುಕ್ತ ಚಾಲನೆ ನೀಡಲಾಯಿತು. ಗುರುವಾರ ಚಾಮುಂಡಿಬೆಟ್ಟದಲ್ಲಿ ದೀಪ ಬೆಳಗಿ, ನಾಡಿನ ಅಧಿದೇವತೆ ನಾಡೋಜ ಡಾ.ಹಂ.ಪ. ನಾಗರಾಜಯ್ಯ (ಹಂಪನಾ) ಮೈಸೂರಲ್ಲಿ ಚಾಮುಂಪೇಶ್ವರಿಗೆ ಪುಷ್ಪಾರ್ಚನೆಗೈಯುವ ಮೂಲಕ ಹತ್ತು ದಿನಗಳ ವೈಭವಕ್ಕೆ ಚಾಲನೆ ನೀಡಿದರು. ಲೋಕ ಅನಾವರಣ ಪೂರ್ಣಕುಂಭ ಸ್ವಾಗತ ನೀಡಲಾಯಿತು 

ಬೆಳಗ್ಗೆ ಬೆಟ್ಟಕ್ಕೆ ಆಗಮಿಸಿದ ಹಂಪನಾ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು  ಬಳಿಕ ಜಾನಪದ ಕಲಾತಂಡಗಳೊಂದಿಗೆ ಅವರನ್ನು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು. ದೇವಸ್ಥಾನಕ್ಕೆ ಆಗಮಿಸಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತಿತರರ ಜತೆಗೂಡಿ ಅಧಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದರು.

ಬಳಿಕ ಬೆಳ್ಳಿರಥದಲ್ಲಿ ಬಣ್ಣ ಬಣ್ಣದ ಹೂವುಗಳಿಂದ ಸರ್ವಾಲಂಕೃತಳಾಗಿ ವಿರಾಜಮಾನಳಾಗಿದ್ದ ಶಕ್ತಿದೇವತೆ ಚಾಮುಂಡೇಶ್ವರಿಗೆ ಗುರುವಾರ ಬೆಳಗ್ಗೆ 9-15 ರಿಂದ 9-45ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ದೀಪ ಬೆಳಗಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಅಗ್ರಪೂಜೆ ಸಲ್ಲಿಸುವ ಮೂಲಕ ನಾಡಹಬ್ಬ ದಸರಾವನ್ನು ಉದ್ಘಾಟಿಸಿದರು.

   

Related Articles

error: Content is protected !!