Home » ಮುಂದಿನ ವಾರ ಇಂಜಿನಿಯರಿಂಗ್ ಆಪ್ಷನ್‌ ಎಂಟ್ರಿ
 

ಮುಂದಿನ ವಾರ ಇಂಜಿನಿಯರಿಂಗ್ ಆಪ್ಷನ್‌ ಎಂಟ್ರಿ

ಲಬ್ಯವಿರುವ ಸೀಟುಗಳ ಎಂಟ್ರಿಗೆ ನಿರ್ಧಾರ

by Kundapur Xpress
Spread the love

ಬೆಂಗಳೂರು : ಎಲ್ಲ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಏಕಕಾಲಕ್ಕೆ ಕೌನ್ಸೆಲಿಂಗ್‌ ಆರಂಭಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿದ್ದರೂ ವೈದ್ಯಕೀಯ, ಆಯುಷ್ ಸೇರಿ ಇನ್ನೂ ಕೆಲ ಇಲಾಖೆಗಳಿಂದ ಈ ಬಾರಿ ವಿವಿಧ ಕೋರ್ಸುಗಳ ಪ್ರವೇಶಕ್ಕೆ ಲಭ್ಯವಿರುವ ಸೀಟುಗಳ ಪಟ್ಟಿ ಸಲ್ಲಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯ ಲಭಿಸಿರುವ ಕೋರ್ಸುಗಳ ಸೀಟುಗಳಿಗೆ ಮುಂದಿನ ವಾರದಿಂದ ಆಪ್ಪನ್ ಎಂಟ್ರಿ ಆರಂಭಿಸಲು ಪ್ರಾಧಿಕಾರ ಮುಂದಾಗಿದೆ.

ಪ್ರಾಧಿಕಾರದ ಕಾರ್ಯನಿರ್ವಹಣಾ ನಿರ್ದೇಶಕ ಎಚ್.ಪ್ರಸನ್ನ ನೀಡಿರುವ ಮಾಹಿತಿ ಪ್ರಕಾರ, ಸದ್ಯ ತಾಂತ್ರಿಕ  ಶಿಕ್ಷಣ ಇಲಾಖೆಯಿಂದ ಕಾಲೇಜುವಾರು ಈ ಬಾರಿ ಸುಮಾರು 70 ಸಾವಿರ ಎಂಜಿನಿಯರಿಂಗ್ ಸೀಟುಗಳು ಸಿಇಟಿ ರ್ಯಾಂಕಿಂಗ್ ಅಭ್ಯರ್ಥಿಗಳಿಗೆ ಸರ್ಕಾರಿ ಕೋಟಾ ಸೀಟುಗಳಾಗಿ ಹಂಚಿಕೆ ಮಾಡಲು ಲಭ್ಯವಾಗಿದೆ. ಅದೇ ರೀತಿ ಬ್ಯಾಚ್ಯುಲರ್ ಆಫ್ ಫಿಜಿಯೋಥೆರಪಿ, ಪಶು ವೈದ್ಯಕೀಯ ಮತ್ತು ಫಾರ್ಮಾ ಸೈನ್ಸಸ್ ಕೋರ್ಸುಗಳಲ್ಲಿ ಲಭ್ಯವಿರುವ ಸೀಟುಗಳ ಪಟ್ಟಿಯನ್ನು (ಸೀಟ್ ಮ್ಯಾಟ್ರಿಕ್ಸ್) ಆಯಾ ಇಲಾಖೆಗಳು ಸಲ್ಲಿಸಿವೆ. ಉಳಿದಂತೆ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್,  ಕೃಷಿ, ನರ್ಸಿಂಗ್ ಸೇರಿ ಇನ್ನೂ ಹಲವು ಕೋರ್ಸುಗಳಲ್ಲಿ ಲಭ್ಯವಿರುವ ಸೀಟುಗಳ ಪಟ್ಟಿಯನ್ನು ಸಂಬಂಧಿಸಿದ ಇಲಾಖೆಗಳು ಈವರೆಗೆ ಪ್ರಾಧಿಕಾರಕ್ಕೆ ಸಲ್ಲಿಸಿಲ್ಲ.

ಹಾಗಾಗಿ ಎಂಜಿನಿಯರಿಂಗ್ ಸೇರಿ ಸೀಟ್ ಮ್ಯಾಟ್ರಿಕ್ಸ್ ಬಂದಿರುವ ಕೋರ್ಸುಗಳ ಪ್ರವೇಶಕ್ಕೆ ಮುಂದಿನ ವಾರ ಆಪ್ಷನ್‌ ಎಂಟ್ರಿ ಆರಂಭಿಸಲಾಗುವುದು. ಎಂಜಿನಿಯರಿಂಗ್ ಸೀಟುಗಳ ಸಂಖ್ಯೆ ದೊಡ್ಡದಿರುವುದರಿಂದ ಆಪ್ಪನ್ ಎಂಟ್ರಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಇತರೆ ಕೋರ್ಸುಗಳ ಸೀಟ್ ಮ್ಯಾಟ್ರಿಕ್ಸ್ ಬಂದ ನಂತರ ಅವುಗಳನ್ನೂ ಆಪ್ಪನ್ ಎಂಟ್ರಿ (ಕಾಲೇಜು ಮತ್ತು ಕೋರ್ಸುವಾರು ಸೀಟುಗಳಿಗೆ ಇಚ್ಚೆ / ಆಯ್ಕೆ ದಾಖಲಿಸುವುದು) ಪ್ರಕ್ರಿಯೆಗೆ ಸೇರಿಸುತ್ತಾ ಹೋಗುತ್ತೇವೆ. ಆದರೆ, ಸೀಟುಗಳ ಹಂಚಿಕೆ ಮಾತ್ರ ಎಲ್ಲ ಕೊರ್ಸುಗಳ ಸೀಟುಗಳಿಗೂ ಒಟ್ಟಿಗೆ ಅಥವಾ ಒಮ್ಮೆಲೇ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 

Related Articles

error: Content is protected !!