Home » ದೂರುದಾರನಿಗೆ ಮಾಸ್ಕ್‌ ಹಾಕಿಸಿದ್ದೆ ಸರ್ಕಾರ : ಆರ್. ಅಶೋಕ್
 

ದೂರುದಾರನಿಗೆ ಮಾಸ್ಕ್‌ ಹಾಕಿಸಿದ್ದೆ ಸರ್ಕಾರ : ಆರ್. ಅಶೋಕ್

by Kundapur Xpress
Spread the love

ಕೊಪ್ಪಳ‌ : ಧರ್ಮಸ್ಥಳ ವಿಚಾರದಲ್ಲಿ ಸರ್ಕಾರ ಬುರುಡೆ ಬಿಟ್ಟಿದೆ. ದೂರುದಾರನಿಗೆ ಮಾಸ್ಕ್ ಹಾಕಿದ್ದೆ ಸರ್ಕಾರ ಎಂದು ವಿಪಕ್ಷ ನಾಯಕ ಆರ್.ಆಶೋಕ್ ಟೀಕಿಸಿದರು.

ಮುನಿರಾಬಾದ್ బళి ಸೋಮವಾರ ಮಾತನಾಡಿದ ಅವರು, ಮಾಸ್ಕ್ ಮ್ಯಾನ್, ಅನನ್ಯ ಭಟ್ ಇವರೆಲ್ಲ ಪಾತ್ರಧಾರಿಗಳು. ಮಾಸ್ಟ್ ಹಾಕಿರುವವನ ಹಿಂದೆ ಸರ್ಕಾರ ಇದೆ. ಅವನಿಗೆ ಮುಸುಕು ಹಾಕಿಸಿದ್ದು ಸರ್ಕಾರ. ಸಿದ್ದರಾಮಯ್ಯನ ಹಿಂದೆ ಪ್ರಗತಿಪರರು ಇದ್ದಾರೆ. ಬುರುಡೆ ಕಥೆ ಹೊರಗಡೆ ಬಂದ ಕೂಡಲೇ ಪ್ರಗತಿಪರರು ಕಾಣೆಯಾಗಿದ್ದಾರೆ ಎಂದರು.

ಲವ್ ಜಿಹಾದ್ ಮಾದರಿಯಲ್ಲಿ ಮತಾಂತರ ಜಿಹಾದ್ ಮಾಡುತ್ತಿದ್ದಾರೆ. ಹಿಂದೂ ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ಸೇರಿಸಲು ಹೊರಟಿದ್ದಾರೆ. ಇದರ ಹಿಂದೆ ದೊಡ್ಡ ಹುನ್ನಾರ ಅಡಗಿದೆ. ಇವರಿಗೆ ಹಿಂದೂ ದೇವಾಲಯಗಳೇ ಟಾರ್ಗೆಟ್, ಚರ್ಚ್ ಹಾಗೂ ಮಸೀದಿ ಕಡೆ ಇವರು ಹೋಗುವುದಿಲ್ಲ. ಇದರ ಹಿಂದೆ ದೊಡ್ಡ ಗ್ಯಾಂಗ್ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಆರ್‌ಎಸ್‌ಎಸ್‌ ಇರಲಿಲ್ಲ ಎಂದರೆ ಭಾರತ ಪಾಕಿಸ್ತಾನ ಆಗುತ್ತಿತ್ತು. ಈಗಾಗಲೇ 2 ಪಾಕಿಸ್ತಾನ ಆಗಿವೆ. ಅವರದ್ದೇ ಸರ್ಕಾರದ ಡಿ.ಕೆ. ಶಿವಕುಮಾರ ಅವರಿಗೆ ದೇಶ_ಭಕ್ತಿಯಿದೆ. ಅವರು ಸಹ ನಮಸ್ತೇ ಸದಾ ವಾತ್ಸಲೇ ಎಂದು ಹಾಡುತ್ತಾರೆ. ಆರ್‌ಎಸ್‌ಎಸ್ ಇರುವುದಕ್ಕೆ ಈ ದೇಶ ಉಳಿದಿದೆ ಎಂದರು.

 

Related Articles

error: Content is protected !!