109
ಬೆಂಗಳೂರು : ಕಳೆದ 8 ತಿಂಗಳಿಂದ ಖಾಲಿ ಇದ್ದ ಪ್ರತಿಪಕ್ಷದ ಮುಖ್ಯ ಸಚೇತಕ ಸ್ಥಾನಕ್ಕೆ ಬಿಜೆಪಿಯ ಎನ್. ರವಿಕುಮಾರ್ ಅವರನ್ನು ನೇಮಿಸಲಾಗಿದೆ. ಸೋಮವಾರದಿಂದ ಆರಂಭವಾದ ಅಧಿವೇಶನದ ಕಲಾಪದ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಇದನ್ನು ಪ್ರಕಟಿಸಿದರು.
ನಂತರ ಬಿಜೆಪಿಯ ಸದಸ್ಯರು ರವಿಕುಮಾರ್ ಬಳಿ ತೆರಳಿ ಶುಭಕೋರಿದರು. ರವಿಕುಮಾರ್ ಈ ಹಿಂದೆಯೂ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಿಸಿದ್ದರು. ಕಳೆದ ಜೂನ್ ನಲ್ಲಿ ಅವರ ಸದಸ್ಯತ್ವ ಅವಧಿ ಕೊನೆಗೊಂಡಿತ್ತು. ಖಾಲಿಯಾದ ಈ ಸ್ಥಾನಕ್ಕೆ ರವಿ ಕುಮಾರ್ ಅವರನ್ನು ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆ ಮಾಡಲಾ ಗಿತ್ತು. ಆದರೆ ಮುಖ್ಯ ಸಚೇತಕರನ್ನಾಗಿ ಬಿಜೆಪಿ ಯಾರನ್ನೂ ನೇಮಿಸಿರಲಿಲ್ಲ. ಹೀಗಾಗಿ ಸುಮಾರು ಎಂಟು ತಿಂಗಳಿಂದ ಈ ಸ್ಥಾನ ಖಾಲಿಯಾಗಿತ್ತು

