Home » ಕುಂದಾಪ್ರದಿಂದ ಬೆಂಗಳೂರಿಗೆ ಪ್ರಯಾಣಿಸಿದ ಸನ್ನಿಧಿ ಬಸ್ಸುಗಳು
 

ಕುಂದಾಪ್ರದಿಂದ ಬೆಂಗಳೂರಿಗೆ ಪ್ರಯಾಣಿಸಿದ ಸನ್ನಿಧಿ ಬಸ್ಸುಗಳು

by Kundapur Xpress
Spread the love

ಕುಂದಾಪುರ : ಕುಂದಾಪುರದ ಎಸ್.ಎಸ್. ಶೆಟ್ಟಿ ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಯಾದ ‘ಶ್ರೀ ಸನ್ನಿಧಿ ಟ್ರಾವೆಲ್ಸ್‌ನ ಹೊಸ ಬಸ್‌ಗಳ ಸಂಚಾರವು ನಿನ್ನೆ ಮಾ. 2ರಿಂದ ಆರಂಭಗೊಂಡಿದ್ದು ಅದಕ್ಕೆ ಪೂರ್ವಭಾವಿಯಾಗಿ 6 ಹೊಸ ಬಸ್‌ಗಳ ಮೆರವಣಿಗೆಯು ಶನಿವಾರ ಸಂಜೆ ಕುಂದಾಪುರದಲ್ಲಿ ನಡೆಯಿತು

ಕೋಟೇಶ್ವರದ ಆರಂಭಗೊಂಡ ಮೆರವಣಿಗೆಯು ಹೆದ್ದಾರಿ ಮೂಲಕ ಹಂಗಳೂರು ಮೂಲಕವಾಗಿ ಕುಂದಾಪುರದ ಶಾಸ್ತ್ರಿ ಸರ್ಕಲ್ ಗೆ ಬಂದು, ಅಲ್ಲಿಂದ ನಗರದ ಮುಖ್ಯ ರಸ್ತೆಯ ಮೂಲಕ ಪಾರಿಜಾತ ಸರ್ಕಲ್, ಹೊಸ ಬಸ್ ನಿಲ್ದಾಣವಾಗಿ ಮತ್ತೆ ಶಾಸ್ತ್ರಿ ಸರ್ಕಲ್‌ನಲ್ಲಿ ಸಂಪನ್ನಗೊಂಡಿತು.

ನಗರದ ವಿವಿಧೆಡೆ ಬಸ್‌ಗಳಿಗೆ ಜನರು ಸ್ವಾಗತಿಸಿ, ಶುಭಹಾರೈಸಿದರು. ಚೆಂಡೆವಾದನದ ಮೂಲಕ ಮೆರವಣಿಗೆಯು ಸಾಗಿಬಂತು. ಶ್ರೀ ಸನ್ನಿಧಿ ಟ್ರಾವೆಲ್ಸ್ನ ಪಾಲುದಾರರಾದ ಉದ್ಯಮಿ ಸತೀಶ್ ಶೆಟ್ಟಿ ಸನ್ನಿಧಿ ಎಸ್. ಶೆಟ್ಟಿ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು ಉಪಸ್ಥಿತರಿದ್ದರು

ನೂತನ ಬಸ್‌ ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು ಮೂತ್ರಾಲಯದೊಂದಿಗೆ ಶೌಚಾಲಯದ ವ್ಯವಸ್ಥೆಯನ್ನು ಹೊಂದಿದೆ ಇದು ರಾಜ್ಯದಲ್ಲೇ ಪ್ರಥಮ ಎನ್ನಲಾಗಿದೆ

 

Related Articles

error: Content is protected !!