ಕುಂದಾಪುರ : ನಗರದ ಪ್ರತಿಷ್ಠಿತ ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ನಾಗರಾಜ್ ಕಾಮಧೇನು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಸೊಸೈಟಿಯ ಉಪಾಧ್ಯಕ್ಷರಾಗಿ ಸತೀಶ್ ನರಸಿಂಹ ಶೇರಿಗಾರ್ ನೇಮಕಗೊಂಡಿದ್ದಾರೆ
ಆಡಳಿತ ಮಂಡಳಿಯ ನಿರ್ದೇಶಕರುಗಳಾಗಿ ಅಜೇಯ ಹವಾಲ್ದಾರ್, ಕೆ.ಅಶೋಕ್ ಬೆಟ್ಟಿನ್, ಕೃಷ್ಣಯ್ಯ ಪಿ. ಮದ್ದೋಡಿ, ಎಂ.ಜಿ. ರಾಜೇಶ್, ಬಿ. ಶ್ರೀಧರ್ ಬೇಲಿಮನೆ, ಶ್ರೀಧರ್ ಪಿ.ಎಸ್. ಕೆ. ಸೂರ್ಯಕಾಂತ್, ರಾಧಾಕೃಷ್ಣ ನಾಯಕ್ ಶ್ರೀಮತಿ ರಶ್ಮಿರಾಜ್ ಮತ್ತು ಶ್ರೀಮತಿ ಶಾರದಾ ವಿಜಯ ಕುಮಾರ್ ನೇಮಕಗೊಂಡಿದ್ದಾರೆ
ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆಯನ್ನು ಸಹಕಾರ ಇಲಾಖೆಯ ಉಪ ನಿಬಂಧಕಿ ಸುಕನ್ಯಾ ಅವರು ನಿರ್ವಹಿಸಿದರು ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ರಾಘವೇಂದ್ರ ಉಪಸ್ಥಿತರಿದ್ದರು
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಾಗರಾಜ್ ಕಾಮಧೇನು ಮಾತನಾಡಿ ನಮ್ಮ ಸೊಸೈಟಿಯು ಒಂದು ಸಾವಿರ ಕೋಟಿ ರೂ. ವ್ಯವಹಾರ ಹೊಂದುವ ಗುರಿ ಇದ್ದು ಈ ನಿಟ್ಟಿನಲ್ಲಿ ಎಲ್ಲಾ ನಿರ್ಧೇಶಕರ ಸಹಕಾರ ಕೋರಿದರು
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಾಗರಾಜ್ ಕಾಮಧೇನು ಹಾಗೂ ಕಾವೇರಿ ಸತೀಶ್‌ರವರನ್ನು ಸೊಸೈಟಿಯ ಮಾಜಿ ನಿರ್ಧೇಶಕರಾದ ಸದಾಶಿವ ಪಡುವರಿ ಮಂಜುನಾಥ್ ಮದ್ದೋಡಿ ಹಾಗೂ ಹಿರಿಯ ಸದಸ್ಯರಾದ ಮಹಾಬಲ ಶೇರಿಗಾರ್ ಕಲ್ಪತರು ಚಂದ್ರಶೇಖರ್ ರಾವ್ ಶ್ರೀಧರ್ ಕಾವೇರಿ ವಿಜಯ್ ಕುಮಾರ್ ಬೆಟ್ಟಿನ್ ಕೋಡಿ ಲೋಕೇಶ್ ಹಾಗೂ ಸಟ್ವಾಡಿ ವಿಜಯ್ ಕುಮಾರ್ ಶೆಟ್ಟಿ ಮುಂತಾದವರು ಅಭಿನಂದಿಸಿದರು

