Home » ನಾಳೆ ಶ್ರೀ ಸನ್ನಿಧಿ ಟಾವೆಲ್ಸ್‌ ಶುಭಾರಂಭ
 

ನಾಳೆ ಶ್ರೀ ಸನ್ನಿಧಿ ಟಾವೆಲ್ಸ್‌ ಶುಭಾರಂಭ

by Kundapur Xpress
Spread the love

ಕುಂದಾಪುರ :  ಕುಂದಾಪುರದ ಎಸ್.ಎಸ್.ಶೆಟ್ಟಿ ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಯಾದ ಶ್ರೀ ಸನ್ನಿಧಿ ಟ್ರಾವೆಲ್ಸ್ ನಾಳೆ ಮಾ.2 ರಂದು ಆರಂಭಗೊಳ್ಳಲಿದೆ.

ಉದ್ಯಮಿ ಶ್ರೀ ಸತೀಶ್ ಶೆಟ್ಟಿ ಹಾಗೂ ಶ್ರೀ ಸನ್ನಿಧಿ ಎಸ್.ಶೆಟ್ಟಿ ಮಾಲೀಕತ್ವದ ‘ಶ್ರೀ ಸನ್ನಿಧಿ ಟ್ರಾವೆಲ್ಸ್  ಬಸ್‌ಗಳು ಕುಂದಾಪುರ ಬೈಂದೂರು, ಕೊಕ್ಕರ್ಣೆ, ಕೊಲ್ಲೂರಿನಿಂದ ಬೆಂಗಳೂರಿಗೆ ಮಾ.2ರಿಂದ ಪ್ರಯಾಣ ಆರಂಭಿಸಲಿದೆ ವೆಬ್‌ಸೈಟ್, ಆಪ್, ರೆಡ್ ಬಸ್, ಅಬಿಬಸ್, ಟ್ರಾವೆಲ್‌ ಯಾರಿ, ಪೇಟಿಎಂ, ಫ್ಲಿಫ್  ಕಾರ್ಟ್ ಮೂಲಕ ಮುಂಗಡ ಟಿಕೆಟ್ ಕಾದಿರಿಸಬಹುದು

ಸನ್ನಿಧಿ ಟ್ರಾವೆಲ್ಸ್ ಆ್ಯಪ್ ಮೂಲಕ ಟಿಕೆಟ್ ಮಾಡಿದರೆ ಶೇ.15, ಸನ್ನಿಧಿ ಟ್ರಾವೆಲ್ಸ್ ವೆಬ್‌ಸೈಟ್ ಮೂಲಕ ಮುಂಗಡ ಟಿಕೆಟ್ ಕಾದಿರಿಸಿದರೆ ಶೇ.10 ರಿಯಾಯಿತಿ ಪಡೆಯಬಹುದು. ವಾರಾಂತ್ಯ, ಹಬ್ಬಹರಿದಿನಗಳಲ್ಲಿ ಕೂಡಾ ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಇರುವುದಿಲ್ಲ

ರಾಜ್ಯದಲ್ಲೇ ಪ್ರಥಮ ಬಾರಿಗೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವಿಶೇಷವಾಗಿ ವಿನ್ಯಾಸಪಡಿಸಿದ ಮೂತ್ರಾಲಯ, ಶೌಚಾಲಯವನ್ನೂ ಒಳಗೊಂಡಿರುವುದು ಈ ಬಸ್‌ಗಳ ವಿಶೇಷವಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಲಾಗಿದ್ದು 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ, ಜಿಪಿಎಸ್, ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ

ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಅಂತಾರಾಜ್ಯಗಳಿಗೂ ಹಾಗೂ ಸಂಚರಿಸಲಿದೆ. ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ರಿಯಾಯಿತಿ ಬಸ್‌ನಲ್ಲಿ ದೊರಕಿಸಿಕೊಡುವ ಯೋಚನೆಯಿದೆ. ಬೆಂಗಳೂರಿಗೆ ಹಗಲು ಪ್ರಯಾಣ ಸೇವೆ ಕೂಡಾ ಆರಂಭವಾಗಲಿದೆ ಎಂದು ಸಂಸ್ಥೆಯ ಪಾಲುದಾರ ಉದ್ಯಮಿ ಶ್ರೀ ಸತೀಶ್ ಶೆಟ್ಟಿ ಹಾಗೂ ಶ್ರೀ ಸನ್ನಿಧಿ ಎಸ್.ಶೆಟ್ಟಿಯವರು ತಿಳಿಸಿದ್ದಾರೆ

 

 

Related Articles

error: Content is protected !!