ಯಾದಗಿರಿ : ಯಾದಗಿರಿ ಪಿ ಎಸ್ ಐ ಪರಶುರಾಮ (34ವರ್ಷ) ಅವರು ಶುಕ್ರವಾರ ಸಂಜೆ ಸಂಶಯಾಸ್ಪದ ರೀತಿ ಮೃತಪಟ್ಟಿದ್ದು, ತಮ್ಮ ಪತಿಯ ಸಾವಿಗೆ ಸ್ಥಳೀಯ ಕಾಂಗ್ರೆಸ್ ಶಾಸಕ ಚೆನ್ನಾ ರೆಡ್ಡಿ ಹಾಗೂ ಅವರ ಪುತ್ರ ಪಂಪನ ಗೌಡ (ಸನ್ನಿಗೌಡ) ಕಿರುಕುಳ ಕಾರಣ ಎಂಬ ಆರೋಪ ಕೇಳಿ ಬಂದಿದ್ದು ವರ್ಗಾವಣೆಗೆ ಅವರು 30 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಹಾಗೂ ಜಾತಿ ನಿಂದನೆ ಕೂಡ ಮಾಡಿದ್ದರು ಎಂದು ಪಿ ಎಸ್ ಐ ಪತ್ನಿ ಶ್ವೇತಾ ದೂರು ನೀಡಿದ್ದಾರೆ. 15 ತಾಸು ಪ್ರತಿಭಟನೆ ನಡೆದ ಬಳಿಕ ಶಾಸಕ, ಪುತ್ರನ ವಿರುದ್ಧ ಯಾದಗಿರಿ ಠಾಣೆಯಲ್ಲಿ ಕೇಸು ದಾಖಲಾಗಿದೆ.