Home » ಸಾವಿರಾರು ಕೋಟಿ ಭ್ರಷ್ಟಾಚಾರದ ದಾಖಲೆ ಇದೆ
 

ಸಾವಿರಾರು ಕೋಟಿ ಭ್ರಷ್ಟಾಚಾರದ ದಾಖಲೆ ಇದೆ

ಬಿಎಸ್‌ವೈ ಕುಟುಂಬದ ವಿರುದ್ದ ಯತ್ನಾಳ್‌ ಆರೋಪ

by Kundapur Xpress
Spread the love

ವಿಜಯಪುರ : ಬಿ.ಎಸ್.ಯಡಿಯೂರಪ್ಪ,ಬಿ.ವೈ.ವಿಜಯೇಂದ್ರ ವಿರುದ್ಧ ಬಂಡೆದ್ದ ಕಾರಣಕ್ಕೇ ಉಚ್ಚಾಟನೆಗೆ ಒಳಗಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಬಿಎಸ್‌ವೈ ಕುಟುಂಬದ ವಿರುದ್ಧ ಆರೋಪಿಸಿದ್ದಾರೆ. ಯಡಿಯೂರಪ್ಪ ಕುಟುಂಬ ಮಾಡಿದ ಸಾವಿರಾರು ಕೋಟಿ ರುಪಾಯಿ ಹಗರಣದ ದಾಖಲೆ, ಆಡಿಯೋಗಳು ನನ್ನಲ್ಲಿವೆ. ಸಂದರ್ಭ ಬಂದಾಗ ವಿಧಾನಸಭೆಯಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ತಾಲೂಕಿನ ಕಗ್ಗೋಡದಲ್ಲಿ ಮಾತನಾಡಿ, ವಿಜಯೇಂದ್ರ ಮಾತನಾಡಿರುವ ಆಡಿಯೋ ಸಂಗ್ರಹಿಸಿ ಇಟ್ಟುಕೊಂಡಿದ್ದೇನೆ. ಕೊರೋನಾ ವೇಳೆಯ ಭ್ರಷ್ಟಾಚಾರ, ಭೂಮಿ ಹೊಡೆದಿರುವುದು ಸೇರಿ ಒಟ್ಟು 1000 ಪುಟಗಳ ದಾಖಲೆ ಸಂಗ್ರಹಿಸಿದ್ದೇನೆ. ಸಿದ್ದರಾಮಯ್ಯಗೆ ತಾಕತ್ತಿದ್ದರೆ ಈ ಬಗ್ಗೆ ತನಿಖೆ ಮಾಡಲಿ ಎಂದು ಸವಾಲು ಹಾಕಿದರು.

 

Related Articles

error: Content is protected !!