ಉಡುಪಿ:ಕೊರಂಗ್ರಪಾಡಿ ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಹಿಂಬದಿ ಕರುಣಾಕರ ಶೆಟ್ಟಿ ಯವರ ಮನೆಯ ಬಳಿ ಇರುವ ಸಾರ್ವಜನಿಕ ಖಾಲಿ ಜಾಗದಲ್ಲಿ ಅಂದರ್-ಬಾಹರ್ ಇಸ್ಪೀಟ್ ಆಟ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ನಗರ ಠಾಣೆಯ ನೀರೀಕ್ಷಕರಾದ ಡಿ ಆರ್ ಮಂಜಪ್ಪ ನವರು ದಾಳಿ ನೆಡೆಸಿ 6 ಜನರನ್ನುಬಂಧಿಸಿದ್ದಾರೆ ಬಂಧಿತರಾದ ಅಶ್ರಫ್(37ವರ್ಷ) ಬಾಲಕೃಷ್ಣ ಶೆಟ್ಟಿ(49ವರ್ಷ) ಮಂಜುನಾಥ ಆಚಾರ್ಯ (42ವರ್ಷ) ಶ್ರೀಧರ್ (52ವರ್ಷ) ಲೋಕೇಶ್ (59ವರ್ಷ) ಹಾಗೂ ಕರುಣಾಕರ ಶೆಟ್ಟಿ (59 ವರ್ಷ) ಬಂಧಿತರಿಂದ 8.380 ನಗದು ಹಾಗೂ ಆಟಕ್ಕೆ ಬಳಸಿದ 52 ಇಸ್ಪೀಟು ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ