Home Uncategorizedಬುರುಡೆ ಚಿನ್ನಯ್ಯನ ಮೊಬೈಲ್‌ಗೆ ಶೋಧ

ಬುರುಡೆ ಚಿನ್ನಯ್ಯನ ಮೊಬೈಲ್‌ಗೆ ಶೋಧ

by Kundapur Xpress

ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಕಸ್ಟಡಿಯಲ್ಲಿ ಇರುವ ದೂರುದಾರ ಚಿನ್ನಯ್ಯನ ವಿಚಾರಣೆಯನ್ನು ತನಿಖಾ ತಂಡ ನಡೆಸಿದೆ.

ಭಾನುವಾರವೂ ಕೋರ್ಟ್‌ಗೆ ಹಾಜರುಪಡಿಸಿದ ತನಿಖಾ ತಂಡ ತಲೆಬುರುಡೆ ಬಗ್ಗೆ ಹಲವು ಬಾರಿ ಪ್ರಶ್ನಿಸಿದರೂ ಆತ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಚಿನ್ನಯ್ಯನನ್ನು ಶನಿವಾರ ಎಸ್‌ಐಟಿ ಬಂಧಿಸಿತ್ತು. ಶನಿವಾರ ರಾತ್ರಿ ಕೂಡ ಚಿನ್ನಯ್ಯನ ವಿಚಾರಣೆ ನಡೆಸಲಾಗಿದ್ದು, ಭಾನುವಾರವೂ ವಿಚಾರಣೆ ಮುಂದುವರಿಯಿತು.

ವಿಚಾರಣೆ ವೇಳೆ ತನಿಖಾ ತಂಡದವರು ಚಿನ್ನಯ್ಯನನ್ನು, ‘ನಿನ್ನ ಮೊಬೈಲ್ ಎಲ್ಲಿ?’ ಎಂದು ಪದೇ, ಪದೇ ವಿಚಾರಿಸಿದ್ದಾರೆ. ಈ ವೇಳೆ, ‘ನನ್ನಲ್ಲಿ ಮೊಬೈಲ್ ಇಲ್ಲ ಎಂದಿದ್ದಾನೆ

Related Articles