252
ಉಡುಪಿ : ನಗರದ ಬನ್ನಂಜೆಯಲ್ಲಿರುವ ಜಯಲಕ್ಷ್ಮಿಬಟ್ಟೆ
ಮಳಿಗೆಯಲ್ಲಿ ಶನಿವಾರ ಪಿಸ್ತೂಲಿನಿಂದ ಆಕಸ್ಮಿಕವಾಗಿ ಗುಂಡು
ಹಾರಿದ್ದು ಓರ್ವ ಸಿಬ್ಬಂದಿ ಗಾಯಗೊಂಡ ಘಟನೆ ನಡೆದಿದೆ
ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಗೊಂಡ ಸಿಬ್ಬಂದಿಯನ್ನು ಬಾಗಲಕೋಟೆ ಮೂಲದ
ಯಲಗುರದಪ್ಪ (31ವರ್ಷ) ಎಂದು ಗುರುತಿಸಲಾಗಿದ್ದು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಶನಿವಾರ ಬೆಳಗ್ಗೆ ಸುಮಾರು 12.00 ಗಂಟೆಯ
ಸುಮಾರಿಗೆ ಉಡುಪಿ ನಗರದ ಬನ್ನಂಜೆಯಲ್ಲಿರುವ
ಜಯಲಕ್ಷ್ಮಿ ಬಟ್ಟೆ ಅಂಗಡಿಯಲ್ಲಿನ ವಾಶ್ ರೂಮಿನ
ಒಳಗೆ ಕ್ಲಿನಿಂಗ್ ಮಾಡುತ್ತಿರುವ ಅವಿನಾಶ್ ಎಂಬವನಿಗೆ
ಪಿಸ್ತೂಲ್ ಸಿಕ್ಕಿದ್ದು ಆತನು ಪಿಸ್ತೂಲನ್ನು ಬಟ್ಟೆ ಅಂಗಡಿಯ
ಮಾಲಕರಿಗೆ ನೀಡಲು ಹೋಗುತ್ತಿರುವಾಗ
ಅದೇ ಅಂಗಡಿಯಲ್ಲಿ ಕ್ಲಿನಿಂಗ್ ಕೆಲಸ ಮಾಡುವ
ಯಲಗುರದಪ್ಪ ಅವಿನಾಶ್ ಕೈಯಿಂದ ಪಿಸ್ತೂಲನ್ನು
ತೆಗೆದುಕೊಳ್ಳುವಾಗ ಪಿಸ್ತೂಲಿನಿಂದ ಆಕಸ್ಮಿಕವಾಗಿ
ಗುಂಡು ಸಿಡಿದು ಯಲಗುರದಪ್ಪ ಅವರ ಎಡ ಕೈಗೆ
ಗುಂಡು ತಾಗಿ ಗಾಯವಾಗಿದೆ ಎನ್ನಲಾಗಿದೆ.
ಸ್ಥಳಕ್ಕೆ ಉಡುಪಿ ಡಿವೈಎಸ್ಪಿ ದಿನಕರ್ ಸೇರಿದಂತೆ
ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ
ಪರಿಶೀಲನೆ ನಡೆಸಿದ್ದಾರೆ
ಪರವಾನಗಿ ಇದೆ
7.65 ಎಂ.ಎಂ. ಪಿಸ್ತೂಲ್ ಇದಾಗಿದ್ದು
ಮಂಗಳೂರಿನ ಮಾಜಿ ಕಾರ್ಪೊರೇಟರ್
ಜಯಪ್ರಕಾಶ್ ಅವರಿಗೆ ಸೇರಿದ್ದಾಗಿದೆ ಅವರು
ಪರವಾನಗಿ ಹೊಂದಿದ್ದಾರೆ ಎಂದು
ಪೊಲೀಸ್ ಮೂಲಗಳು ತಿಳಿಸಿವೆ

