180
ಉಡುಪಿ : ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಲಯವನ್ನು ರಥಬೀದಿಯ ಸುಗುಣ ಸಭಾಂಗಣದಲ್ಲಿ ಇಂದು ಅಪರಾಹ್ನ 4 ಗಂಟೆಗೆ ಸ್ವಾಗತ ಸಮಿತಿ ಗೌರವಾಧ್ಯಕ್ಷ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ ಎಂದು ಸಮಿತಿ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಮಾತನಾಡಿದ ಕೆ. ರಘುಪತಿ ಭಟ್ ಸ್ವಾಗತ ಸಮಿತಿ ಹಾಗೂ ಉಪಸಮಿತಿಯ ಪೂರ್ಣ ಪ್ರಮಾಣದ ಸಭೆ ನಡೆಯಲಿದ್ದು, ಪರ್ಯಾಯ ಲಾಂಛನವನ್ನೂ ಹೆಗ್ಗqಯವರುÉ ಬಿಡುಗಡೆಗೊಳಿಸಲಿದ್ದಾರೆ. ಸಭೆಯಲ್ಲಿ ಪರ್ಯಾಯ ಮಹೋತ್ಸವದ ರೂಪು ರೇಷೆಗಳ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ ಎಂದರು.
ಪುತ್ತಿಗೆ ಮಠದ ವಿಶ್ವಗೀತಾ ಪರ್ಯಾಯಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಪ್ರತೀ ಮಂಗಳವಾರ ವಿವಿಧ ಸಮಿತಿಗಳ ಸಭೆ ನಡೆಸಲಾಗುತ್ತಿದೆ. ಪರ್ಯಾಯ ಕಾರ್ಯಕ್ರಮಗಳಿಗೆ 5 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದೆ ಎಂದರು.

