96
ಬಂಗಾರಪೇಟೆ (ಕೋಲಾರ) : ಚಾಕೋಲೆಟ್‌ನಲ್ಲಿ ಮಾನವನ ಹಲ್ಲು ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿದೆ. ತಾಲೂಕಿನ ಬೂದಿಕೋಟೆ ಗ್ರಾಮದ ನಿವಾಸಿ ಭಾರತಿ ಎಂಬುವವರು ಚಿಲ್ಲರೆ ಅಂಗಡಿಯಲ್ಲಿ ಟೂಟಿ ಫ್ರೂಟ್ ಕಂಪನಿಯ ಚಾಕೋಲೆಟ್ ಖರೀದಿಸಿದ್ದರು. ಅದರ ರ್ಯಾಪರ್ ಬಿಡಿಸಿ ಬಾಯಿಗೆ ಹಾಕಿಕೊಂಡು ಚಪ್ಪರಿಸುವಾಗ ಗಟ್ಟಿಯಾದ ಪದಾರ್ಥ ಇರುವುದು ಕಂಡು ಬಂದು ಚುಚ್ಚುವಂತೆ ಭಾಸವಾಗಿದೆ.
ಕೂಡಲೇ ಅದನ್ನು ಬಾಯಿಯಿಂದ ಹೊರತೆಗೆದು ನೋಡಿದಾಗ ಮಾನವನ ಹಲ್ಲು ಎಂಬುದು ಗೊತ್ತಾಗಿದೆ. ಹಲ್ಲಿನಲ್ಲಿ ಕಬ್ಬಿಣದ ಸಣ್ಣ ತುಂಡು ಇರುವುದು ಸಹ ಕಂಡು ಬಂದಿದ್ದು, ಭಾರತಿ ಆತಂಕಕ್ಕೆ ಒಳಗಾಗಿದ್ದಾರೆ. ಈ ಚಾಕೋಲೆಟ್‌ನ ಚಿತ್ರ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ

