ಬೆಂಗಳೂರು : ಕಂದಾಯ ಇಲಾಖೆ ಎಲ್ಲಾ ಇಲಾಖೆಗಳ ಮಾತೃ ಇಲಾಖೆ ಎಂದು ಪರಿಗಣಿಸಲಾಗುತ್ತಿದೆ ಹೀಗಾಗಿ ಕಂದಾಯ ಇಲಾಖೆ ನೌಕರರು ಸಹ ಮಾತೃ ಹೃದಯದಿಂದ ಜನಸೇವೆಗೆ ಮುಂದಾಗಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಕಿವಿಮಾತು ಹೇಳಿದರು
ಅವರು ಕಂದಾಯ ದಿನಾಚರಣೆ ಅಂಗವಾಗಿ ಇಲಾಖೆ ನೌಕರರ ಸಂಘದ ವತಿಯಿಂದ ಬೆಂಗಳೂರು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ನೌಕರರ ಕಾರ್ಯಗಾರ ವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ಕಂದಾಯ ಇಲಾಖೆ ಎಲ್ಲಾ ಇಲಾಖೆಗಳ ಮಾತೃ ಇಲಾಖೆ ಎಂದು ಹೇಳಿದರೆ ಮಾತ್ರ ಸಾಲದು ಜನಸೇವೆಯನ್ನು ಕೂಡ ಮಾತೃ ಹೃದಯದಿಂದ ಮಾಡಬೇಕು ಎಂದ ಅವರು ಕಂದಾಯ ಇಲಾಖೆ ಮನಸ್ಸು ಮಾಡಿದರೆ ಜನರಿಗೆ ಒಳ್ಳೆಯದನ್ನು ಮಾಡಬಹುದು ಕೆಟ್ಟದ್ದನ್ನು ಮಾಡಬಹುದು ಆದರೆ ಜನರಿಗೆ ಒಳಿತನ್ನು ಮಾಡುದಷ್ಟೇ ನಮ್ಮ ಧ್ಯೇಯವಾಗಬೇಕು ಎಂದು ಅವರು ನುಡಿದರು