ಕುಂದಾಪುರ : ಕೋಟೇಶ್ವರ ಸಮೀಪದ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದ ಎದುರುಗಡೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನೋವಾ ಕಾರಿಗೆ ಇನ್ಸುಲೇಟರ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ

ಕುಂದಾಪುರ ಕಡೆಯಿಂದ ಕೇರಳಕ್ಕೆ ಚಲಿಸುತ್ತಿದ್ದ ಇನ್ನೋವಾ ಕಾರಿಗೆ ಹಿಂದಿನಿಂದ ಬಂದ ಇನ್ಸುಲೇಟರ್ ಲಾರಿಯ ಎಡಬದಿಯ ಟೈರ್ ಸ್ಪೋಟಗೊಂಡು ಕಾರಿಗೆ ಢಿಕ್ಕಿ ಹೊಡೆದು 100 ಮೀಟರ್ ಎಳೆದುಕೊಂಡು ಹೋಗಿ ಲಾರಿ ಪಲ್ಟಿಯಾಗಿದೆ
ಢಿಕ್ಕಿಯ ರಭಸಕ್ಕೆ ಇನ್ನೋವಾ ಕಾರು ಸಂಪೂರ್ಣ ಗುಜ್ಜು ನುಜ್ಜಾಗಿದ್ದು ರಸ್ತೆ ಬದಿಯಲ್ಲಿ ಅಳವಡಿಸಿದ್ದ ಫ್ಲೆಕ್ಸಿನ ಕಬ್ಬಿಣದ ರಾಡು ಅಡ್ಡ ಸಿಕ್ಕಿದ ಪರಿಣಾಮ ಕಾರಿನ ಮೇಲ್ಬಾಗದ ಚಾವಣಿ ನುಜ್ಜು ಗುಜ್ಜಾಗಿ ಹಾರಿಹೋಗಿದ್ದು ಕಾರಿನ ಹಿಂಬಾಗ ಮತ್ತು ಮುಂಬಾಗವು ಸಂಪೂರ್ಣ ಜಖಂಗೊಂಡಿದೆ
ಅಪಘಾತಗೊಂಡ ಕೆಲವೇ ಕ್ಷಣಗಳಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ಸಹಾಯದಿಂದ ಗಾಯಳುಗಳನ್ನು ಕೊಟೇಶ್ವರದ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಐವರಲ್ಲಿ ನಾಲ್ಕು ಮಂದಿಯನ್ನು ಅಂಬುಲೆನ್ಸ್ ಮೂಲಕ ಮಣಿಪಾಲದ ಕೆಎಂಸಿ ಸಾಗಿಸಲಾಗಿದೆ ಕೇರಳ ಕಣ್ಣೂರಿನ ನಿವಾಸಿಗಳಾದ ನಾರಾಯಣ ಚಿತ್ರಾ ಅನಿತ ಹಾಗೂ ವತ್ಸಲಾ ಎಂದು ಗುರುತಿಸಲಾಗಿದೆ
ಲಾರಿ ಚಾಲಕನಿಗೂ ಪೆಟ್ಟಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ


