ಉಡುಪಿ: ಖಾಸಗಿ ವಿಚಾರ ಹೊರಗಡೆ ಹರಿದಾಡಿ ದುರ್ಬಳಕೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ನಮಗೆ ನಮ್ಮ ವಿದ್ಯಾರ್ಥಿನಿಯರ ರಕ್ಷಣೆ ಮುಖ್ಯವಾಗಿದೆ ಎಂದು ಉಡುಪಿ – ಚಿಕ್ಕಮಗಳೂರು ಸಂಸದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಉಡುಪಿಯಲ್ಲಿ ನಡೆದ ಘಟನೆ ದೇಶದ ಗಮನ ಸೆಳೆದಿದ್ದು ಹಿಜಾಬ್ ಬಳಿಕ ಇದೀಗ ವೀಡಿಯೋ ಬಗ್ಗೆ ಚರ್ಚೆ ಆಗುತ್ತಿದೆ. ಜನಪ್ರತಿನಿಧಿಗಳು ,ಡಿಸಿ ಎಸ್ ಪಿಗೆ ವಿದ್ಯಾರ್ಥಿನಿ ಯರು ಮಾಹಿತಿ ನೀಡಿದ್ದಾರೆ ಲಂಚ್ ಬ್ರೇಕ್ ಸಮಯದಲ್ಲಿ ವಿದ್ಯಾರ್ಥಿಗಳು ಕಾಲೇಜ್ ಕ್ಯಾಂಪಸ್ ಗೆ ಬರುತ್ತಿದ್ದರು. ಎಲ್ಲಾ ಸಿಸಿಟಿವಿ ದೃಶ್ಯ, ಮೊಬೈಲ್ ಗಳೆಲ್ಲವನ್ನು ಎಫ್ ಎಸ್ ಎಲ್ ಗೆ ಕಳುಹಿಸಬೇಕು ಇಲ್ಲಿ ಯಾರನ್ನೂ ಇಲ್ಲಿ ರಕ್ಷಿಸುವ ಪ್ರಶ್ನೆ ಇಲ್ಲ. ಈ ಹಿಂದೆ ಅಲ್ ಖೈದಾ ಉಡುಪಿ ಹಿಜಬ್ ಘಟನೆ ಬಗ್ಗೆ ಮಾತನಾಡಿದೆ ಆದಷ್ಟು ಬೇಗ ಈ ಘಟನೆಯ ತನಿಖೆ ಆಗಬೇಕು ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದರು
ಇಲ್ಲಿ ಪಕ್ಷ ಸರಕಾರ ಯಾವುದು ಎಂಬೂದು ಮುಖ್ಯ ಅಲ್ಲ ಬದಲಾಗಿ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಇದು. ಯಾವುದೇ ಹಾಸ್ಟೆಲ್ ಕಾಲೇಜು ವಸತಿ ಶಾಲೆ ಯಲ್ಲಿ ಯಾರೇ ಹೀಗೆ ಮಾಡಿದ್ರೂ ನನ್ನ ಗಮನಕ್ಕೆ ತನ್ನಿ ನಾನು ನಿಮ್ಮ ಅಕ್ಕನಾಗಿ ವಿನಂತಿ ಮಾಡುತ್ತೇನೆ ಮಾಹಿತಿ ನೀಡಿದವರನ್ನು ಗೌಪ್ಯವಾಗಿ ಇಟ್ಟು ನಿಮ್ಮನ್ನು ರಕ್ಷಣೆ ಮಾಡುತ್ತೇನೆ. ಲವ್ ಜಿಹಾದ್ ಮತಾಂತರ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಕೇಂದ್ರ ಗೃಹ ಸಚಿವರ ಗಮನಕ್ಕೂ ತಂದು ನಾನು ನ್ಯಾಯ ಕೊಡಿಸುತ್ತೇವೆ ಎಂದರು.
ಈ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ ಅಲ್ಲದೆ ರಾಜಕೀಯ ಮಾಡಲು ಸದ್ಯ ಯಾವುದೇ ಚುನಾವಣೆ ಇಲ್ಲ. ಇದು ನಮ್ಮ ವಿದ್ಯಾರ್ಥಿನೀಯರ ಮಾನ ಪ್ರಾಣದ ಪ್ರಶ್ನೆ, ವಿದ್ಯಾರ್ಥಿನಿಗಳನ್ನು ಪ್ರಶ್ನೆ ಮಾಡುವ ಬದಲು ತಾಂತ್ರಿಕ ತನಿಖೆ ಮಾಡುವುದು ಉತ್ತಮ ಎಂದರು.