Home » ವರದಿ ಬಂದ ಬಳಿಕ ಕ್ರಮ : ಸಿಎಂ
 

ವರದಿ ಬಂದ ಬಳಿಕ ಕ್ರಮ : ಸಿಎಂ

by Kundapur Xpress
Spread the love

ಉಡುಪಿ : ಉಡುಪಿ ಜಿಲ್ಲೆಯ ಕಾಲೇಜ್ ನಲ್ಲಿ ನಡೆದ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ ಡಿವೈಎಸ್ಪಿ ನೇತೃತ್ವದ ತಂಡ ತನಿಖೆ ಮಾಡುತ್ತಿದೆ ಕಾಲೇಜು ವಿದ್ಯಾರ್ಥಿನಿ ದೂರು ನೀಡಿಲ್ಲ ಕಾಲೇಜಿನ ಆಡಳಿತ ಮಂಡಳಿಯು ಕೇಸ್ ಕೊಟ್ಟಿಲ್ಲ ತನಿಖೆಯ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ

ಅವರು ಮಂಗಳವಾರ ಪಡುಬಿದ್ರಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು ಜಿಲ್ಲೆಯಲ್ಲಿ 98 ಕಿಲೋಮೀಟರ್ ಕಡಲಿದ್ದು ಆಗಾಗ ಕಡಲ್ಕೋರೆತ  ಉಂಟಾಗುತ್ತದೆ ಕೆಲವಡೆ ಶಾಶ್ವತ ಪರಿಹಾರ ನಡೆದಿದೆ ಕಲವೆಡೆ ಆಗಿಲ್ಲ ಮಳೆ ಬಂದಾಗ ಕಡಲು ಪ್ರಕ್ಷುಬ್ದಗೊಂಡು ಭೂಭಾಗವನ್ನು ಕಬಳಿಸುತ್ತದೆ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ ಎಂದರು

   

Related Articles

error: Content is protected !!