Home » ಎಕ್ಸಲೆಂಟ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಕಾರ್ಯಗಾರ
 

ಎಕ್ಸಲೆಂಟ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಕಾರ್ಯಗಾರ

by Kundapur Xpress
Spread the love

ಕುಂದಾಪುರ : ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲಾ ಅರ್ಥಶಾಸ್ತ್ರ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ವೇದಿಕೆಯ ಅರ್ಥಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಗಾರವು ಸುಣ್ಣಾರಿಯ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ಜರುಗಿತು.

ಉಡುಪಿ ಜಿಲ್ಲಾ ಅರ್ಥಶಾಸ್ತ್ರ ವೇದಿಕೆಯ ಅಧ್ಯಕ್ಷರಾದ ನಾಗರಾಜ್‌ ವೈದ್ಯ ಮಾತನಾಡಿ ಅರ್ಥಶಾಸ್ತ್ರ ವೇದಿಕೆ ಸಾಗಿ ಬಂದ ಹಾದಿಯನ್ನು ವಿವರಿಸುವುದರ ಜೊತೆಗೆ ಎಲ್ಲಾ ಅರ್ಥಶಾಸ್ತ್ರ ಉಪನ್ಯಾಸಕರು ತಮ್ಮ ಕೌಶಲ್ಯವನ್ನು ಬದಲಾದ ಕಾಲಘಟ್ಟಕ್ಕೆ ಸರಿಯಾಗಿ ಹೆಚ್ಚಿಸಿಕೊಳ್ಳಿ ಎಂದು ಕರೆ ನೀಡಿದರು .ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸುಜ್ಞಾನ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾಕ್ಟರ್ ರಮೇಶ್ ಶೆಟ್ಟಿ ಯವರು ಉಪನ್ಯಾಸಕರುಗಳು ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯನ್ನ ಕಾಯ್ದುಕೊಂಡು ಮೌಲ್ಯಮಾಪನ ಮಾಡಬೇಕು ಎಂದರು ಅಲ್ಲದೆ ಅರ್ಥಶಾಸ್ತ್ರ ಪ್ರತಿಯೊಬ್ಬರ ಬದುಕಿನಲ್ಲೂ ಅಗತ್ಯವಾದ ವಿಷಯವಾಗಿದ್ದು ಅದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.

ಸುಜ್ಞಾನ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಪ್ರತಾಪ್ ಚಂದ್ರ ಶೆಟ್ಟಿ ಕೋಶಾಧಿಕಾರಿಗಳಾದ ಭರತ್ ಶೆಟ್ಟಿ ಅರ್ಥಶಾಸ್ತ್ರ ವೇದಿಕೆಯ ಗೌರವಾಧ್ಯಕ್ಷರಾದ ಕೊಟ್ರಾ ಸ್ವಾಮಿಯವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಅರ್ಥಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ಶೇಕಡ 100 ಫಲಿತಾಂಶ ದಾಖಲಿಸಿದ ಉಪನ್ಯಾಸಕರುಗಳನ್ನು ಅಭಿನಂದಿಸಲಾಯಿತು ಇದೇ ಸಂದರ್ಭದಲ್ಲಿ ನಿವೃತ್ತಿಗೊಂಡ ಅರ್ಥಶಾಸ್ತ್ರ ಉಪನ್ಯಾಸಕರು ಮತ್ತು ಪಿ ಎಚ್ ಡಿ ಪದವಿ ಪಡೆದ ಅರ್ಥಶಾಸ್ತ್ರ ಉಪನ್ಯಾಸಕರನ್ನು ಸನ್ಮಾನಿಸಲಾಯಿತು .ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀನಿವಾಸ್ ವೈದ್ಯ ನಿರೂಪಿಸಿದ ಕಾರ್ಯಕ್ರಮದಲ್ಲಿ ನಾಗರಾಜ್‌ ವೈದ್ಯ ಸ್ವಾಗತಿಸಿ ಅಕ್ಷಯ್ ಹೆಗ್ಡೆ  ಮೊಳಹಳ್ಳಿ ವಂದಿಸಿದರು

   

Related Articles

error: Content is protected !!