Home » ಮೊಬೈಲ್ ಚಾರ್ಜರ್ ಕಚ್ಚಿ ಮಗು ಸಾವು
 

ಮೊಬೈಲ್ ಚಾರ್ಜರ್ ಕಚ್ಚಿ ಮಗು ಸಾವು

by Kundapur Xpress
Spread the love

ಕಾರವಾರ : ಮನೆಯಲ್ಲಿ ಹಾಕಿದ್ದ ಮೊಬೈಲ್ ಚಾರ್ಜರ್ ಅನ್ನು ಬಾಯಲ್ಲಿ ಕಚ್ಚಿದ 8 ತಿಂಗಳ ಮಗು ಸಾವಿಗೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಿದ್ದರದಲ್ಲಿ ನಡೆದ ಘಟನೆಯಲ್ಲಿ ಸಂತೋಷ ಹಾಗೂ ಸಂಜನಾ ಎಂಬವರ ಮಗು ಸಾನಿಧ್ಯ ಮೃತಪಟ್ಟಿದ್ದಾಳೆ  

ಮೊಬೈಲ್ ಚಾರ್ಜ್ ಮಾಡುವಾಗ ಪೋಷಕರು ಪ್ಲಗ್ ಅನ್ನು ಸ್ವಿಚ್ ಆಫ್ ಮಾಡಲು ನಿರ್ಲಕ್ಷ್ಯ ವಹಿಸಿದ್ದು ಮಗು ಆಟವಾಡುವಾಗ ಚಾರ್ಜರ್ ಪಿನ್ ಅನ್ನು ಬಾಯಿಗೆ ಇಟ್ಟುಕೊಂಡಿದ್ದರಿಂದ ಶಾಕ್ ಹೊಡೆದು ಮಗು ಮೃತಪಟ್ಟಿದೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

   

Related Articles

error: Content is protected !!