ಕುಂದಾಪುರ :ಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯ ಹಾಲಾಡಿ ರಸ್ತೆಯ ಗುಡ್ಡೆಯಂಗಡಿಯಲ್ಲಿ ಇಸ್ಪೀಟ್ ಆಡುತ್ತಿದ್ದ ಅಡ್ಡೆಗೆ ಕೋಟ ಪೊಲೀಸರು ದಾಳಿ ನಡೆಸಿ 26 ಜನರನ್ನು ವಶಕ್ಕೆ ಪಡೆದಿದ್ದಾರೆ
ನಿನ್ನೆ ಶನಿವಾರ ರಾತ್ರಿ ಕುಂದಾಪುರ ತಾಲೂಕಿನ ಹಾಲಾಡಿ ರಸ್ತೆಯ ಗುಡ್ಡೆ ಅಂಗಡಿಯ ವಿನಾಯಕ ಸಭಾಭವನದಲ್ಲಿ ಇಸ್ಪೀಟ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕೋಟ ಠಾಣಾಧಿಕಾರಿ ಶಂಭುಲಿಂಗಯ್ಯ ಹಾಗೂ ಸಿಬ್ಬಂದಿಗಳು ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿ 26 ಮಂದಿಯನ್ನು ವಶಕ್ಕೆ ಪಡೆದು ಅವರಿಂದ 1,49,680 ಲಕ್ಷ ರೂ. ನಗದು ಹಾಗೂ ಮೂರು ಕಾರು, ನಾಲ್ಕು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲದೆ ಆರೋಪಿಗಳಾದ ಅಬ್ದುಲ್ ಮುನೀರ್, ಕುಂದಾಪುರ ಸಲ್ಮಾನ್, ತೀರ್ಥಹಳ್ಳಿ ಬಸವರಾಜ, ವಿಷ್ಣು ಕೆ.ವಿ., ದಿನೇಶ್,ಕೆ. ವಿನಾಯಕ ಸಂದೀಪ, ಕೃಷ್ಣ, ಸುಧಾಕರ, ನಾಗರಾಜ, ಸುಬ್ರಹ್ಮಣ್ಯ, ಶ್ರೀಧರ, ಇ. ಅ್ಯಂಟನಿ ಮಸ್ಕರೇನಸ್, ಶೃತಿರಾಜ್, ರಘು, ಹುಸೇನ್, ಸಂದೇಶ್, ರಾಜು ಮೋಗೇರ, ಗೋಪಾಲ, ಗಣೇಶ್,ಮಿಥುನ್ , ಸುಧರ್ಮ, ಕಮಲಾಕ್ಷ , ಸುಧಾಕರ, ಇಸ್ಪೀಟ್ ಆಡಿಸುತ್ತಿದ್ದ ಉದಯ್ ಕುಮಾರ್ ಶೆಟ್ಟಿ ಮೊಳಹಳ್ಳಿ, ಕಟ್ಟಡದ ಮಾಲೀಕ ಸಂತೋಷ್ ಶೆಟ್ಟಿ ಸೇರಿ ಒಟ್ಟು 26 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ