ಮಂಗಳೂರು : ಅಪಾರ್ಟ್ಮೆಂಟ್ಒಂದರ ಟೆರೇಸ್ ನ 17 ನೇ ಮಾಳಿಗೆಯಿಂದ ಉದ್ಯಮಿಯೊಬ್ಬರು ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಬೆಂದೂರ್ ವೆಲ್ ನಲ್ಲಿ ನಡೆದಿದೆ
ಹಿರಿಯ ಉದ್ಯಮಿಯಾದ ಮೋಹನ್ ಅಮೀನ್ ಎಂಬುವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಅವರಿಗೆ 67 ವರ್ಷ ಪ್ರಾಯವಾಗಿದ್ದು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ
ಮೋಹನ್ ಅಮೀನ್ ರವರು ಅನೇಕ ಧಾರ್ಮಿಕ ಹಾಗೂಸಾಂಸ್ಕೃತಿಕ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದು ಅವರ ನಿಧನಕ್ಕೆ ಶಾಸಕರಾದ ಡಿ ವೇದವ್ಯಾಸಕಾಮತ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ ಅವರ ಪರ್ಸನಲ್ಲಿ ಡೆತ್ ನೋಟ್ ಸಿಕ್ಕಿದ್ದುನನ್ನ ಸಾವಿಗೆ ನಾನೇ ಕಾರಣ ಮಾನಸಿಕ ಖಿನ್ನತೆಯಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ನನ್ನನ್ನುಕ್ಷಮಿಸಿ ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ