ಕುಂದಾಪುರ : ನಗರದ ಕೆ ಎಸ್ ಆರ್ ಟಿ ಸಿ ಬಸ್ಟ್ಯಾಂಡ್ ನ ರಾಷ್ಟ್ರೀಯ ಹೆದ್ದಾರಿ 66 ರ ಬಳಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಬಸವನಿಗೆ (ಗೂಳಿ) ಢಿಕ್ಕಿ ಹೊಡೆದ ಪರಿಣಾಮ ಬಸವ ಸ್ಥಳದಲ್ಲೇ ಮೃತಪಟ್ಟಿದೆ ಕಳೆದ ಹಲವು ದಿನಗಳಿಂದ 4 ಬಸವಗಳು ಒಟ್ಟಿಗೆ ಓಡಾಡುತ್ತಿದ್ದು ರಸ್ತೆ ದಾಟುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ
ತಕ್ಷಣವೇ ಒಂದು ಬಸವ ಢಿಕ್ಕಿ ಹೊಡೆದ ಬಸ್ಸನ್ನು ಹಿಂಬಾಲಿಸಿಕೊಂಡು ಹೋದರೆ ಮತ್ತೇರಡು ಬಸವಗಳು ಸ್ಥಳದಲ್ಲೇ ಅಸುನೀಗಿದ ಬಸವನ ಕಿವಿಯಲ್ಲಿ ಕೂಗಿ ಕೂಗಿ ಅದನ್ನು ಮೇಲೇಳಿಸಲು ಮಾಡುತ್ತಿರುವ ಪ್ರಯತ್ನವನ್ನು ಕಂಡು ನೆರೆದ ಸಾರ್ವಜನಿಕರ ಮೈ ಮನ ಕಲಕುವಂತಾಗಿತ್ತು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಸಂಘಟನೆಯವರು ಬಸವನನ್ನು ಅಲ್ಲಿಂದ ತೆರವುಗೊಳಿಸಿದ್ದು ಬಸವಣ್ಣನ ನಿಧನಕ್ಕೆ ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ