Home » ಭ್ರಾಮರೀ ಯಕ್ಷವೈಭವ – 2023
 

ಭ್ರಾಮರೀ ಯಕ್ಷವೈಭವ – 2023

by Kundapur Xpress
Spread the love

ಮಂಗಳೂರು : ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಆಶ್ರಯದಲ್ಲಿ ಆಗಸ್ಟ್ 12 ಶನಿವಾರದಂದು ಸಂಜೆ 7 ರಿಂದ ಮರುದಿನ ಮುಂಜಾನೆಯವರೆಗೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆರನೇ ವರ್ಷದ ಭ್ರಾಮರೀ ಯಕ್ಷವೈಭವ – 2023 ಜರಗಲಿದೆ.
ಸಂಜೆ 7 ರಿಂದ ಸಭಾ ಕಾರ್ಯಕ್ರಮ ಜರಗಲಿದ್ದು .ಹಿರಿಯ ಯಕ್ಷಗಾನ ವಿದ್ವಾಂಸ,ವಿಮರ್ಶಕ ಡಾ| ಎಂ ಪ್ರಭಾಕರ ಜೋಷಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ತುಳು ಸಂಘ ಬರೋಡಾ ದ ಅಧ್ಯಕ್ಷ ಶಶಿಧರ್ ಶೆಟ್ಟಿ, ಮನಾಪ ಮೇಯರ್ ಜಯಾನಂದ ಅಂಚನ್,ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್,ಉದ್ಯಮಿ ಚಂದ್ರಶೇಖರ ಮಾಡ ಕುದ್ರಾಡಿಗುತ್ತು ಭಾಗವಹಿಸಲಿದ್ದಾರೆ.

ಹಿರಿಯ ಯಕ್ಷಗಾನ ಕಲಾವಿದ ಕೋಡಿ ಕೃಷ್ಣ( ಕುಷ್ಟ)ಗಾಣಿಗ ಅವರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಭ್ರಾಮರೀ ಯಕ್ಷಸೇವಾಪುರಸ್ಕಾರವನ್ನು ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘ ಮಂಗಳೂರು ಹಾಗೂ ಕಟೀಲು ಮೇಳದ ನೇಪಥ್ಯ ಕಲಾವಿದ ವಿಠಲ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಗುವುದು. ರಾತ್ರಿ 9 ರಿಂದ ಚೆಂಡೆ ಜುಗಲ್‌ಬಂದಿ, ನಾಡಿನ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಶರಣ ಸೇವಾರತ್ನ,ರಾಣಿ ಶಶಿಪ್ರಭೆ,ಶ್ರೀ ದೇವಿ ಕೌಶಿಕೆ ಎಂಬ ಯಕ್ಷಗಾನ ಜರಗಲಿದ್ದು.ಈ ಎಲ್ಲಾ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇರುತ್ತದೆ

   

Related Articles

error: Content is protected !!