ಉಡುಪಿ : ಶಂಕರಪುರ ಸೈಂಟ್ ಜೋನ್ಸ್ ಪೌಢಶಾಲೆಯಲ್ಲಿ ಆಯೋಜಿಸಲಾದ “ಉಡುಪಿ ವಲಯ ಮಟ್ಟದ ಪೌಢಶಾಲಾ ಬಾಲಕಿಯರ ವಾಲಿಬಾಲ್ ಪಂದ್ಯಾಟ”ವನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಧರ್ಮಗುರುಗಳಾದ ರೆ.ಫಾ ವಿಜಯ್ ಡಿಸೋಜಾ, ಸೈಂಟ್ ಜೋನ್ಸ್ ಚರ್ಚಿನ ಪಾಲನ ಸಮಿತಿ ಉಪಾಧ್ಯಕ್ಷರಾದ ಜೋನ್ ಮಾರ್ಟಿಸ್, ಕಾರ್ಯದರ್ಶಿಗಳಾದ ಗಾಬ್ರಿಯಲ್ ಮಾರ್ಟಿಸ್, ಕ್ರೀಡಾಕೂಟದ ಮುಖ್ಯ ಪ್ರಾಯೋಜಕರಾದ ಫ್ರಾನ್ಸಿಸ್ ಪ್ರಕಾಶ್ ಡಿಸೋಜಾ, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ ಎಸ್. ಆಚಾರ್ಯ,
ಸದಸ್ಯರಾದ ಅಶೋಕ್ ರಾವ್, ಪ್ಲಾವಿಯಾ ಮಿನೇಜಸ್, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಗೋಪಾಲ್ ಶೆಟ್ಟಿ, ಸಿ.ಆರ್.ಪಿ ಅಚ್ಚಡ ಕ್ಲಸ್ಟರೆನ್, ಶಾಲಾ ಮುಖ್ಯೋಪಾಧ್ಯಾಯರಾದ ಅಶ್ವಿನ್ ರೊಡ್ರಿಗಸ್, ತಾಲ್ಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಸುವರ್ಣ ಹಾಗೂ ಜೋಸೆಫ್ ಕಸ್ತೆಲಿನೊ ಉಪಸ್ಥಿತರಿದ್ದರು