Home » ನಂಜನಗೂಡಿನಲ್ಲಿ ರಾಯರ ಬೃಂದಾವನ
 

ನಂಜನಗೂಡಿನಲ್ಲಿ ರಾಯರ ಬೃಂದಾವನ

ಗುರು ರಾಘವೇಂದ್ರರ ಪವಾಡಗಳು

by Kundapur Xpress
Spread the love

ಸುಜ್ಞಾನೇಂದ್ರ  ತೀರ್ಥರು  ಮಂತ್ರಾಲಯದ ಯತಿಗಳಲ್ಲಿ  12ನೆಯ ಯತಿಗಳು. 1836 ರಿಂದ 1862  25 ವರ್ಷಗಳ ಕಾಲ  ಇವರು ಪೀಠದಲ್ಲಿದ್ದರು ಸುಜ್ಞಾನೇಂದ್ರ ತೀರ್ಥರು ರಾಯರ ಅಪ್ರತಿಮ ಭಕ್ತರು. ಅನೇಕ ವರ್ಷಗಳ ಕಾಲ ಸುಜ್ಞಾನೇಂದ್ರ ತೀರ್ಥರು  ಮಂತ್ರಾಲಯದಲ್ಲಿ ರಾಯರ  ಧ್ಯಾನದಲ್ಲಿ ಲೀನವಾಗಿದ್ದರು. ಒಂದು ದಿನ ರಾಘವೇಂದ್ರ ಸ್ವಾಮಿಗಳು ಸುಜ್ಞಾನೇಂದ್ರ ತೀರ್ಥರ  ಕನಸಿನಲ್ಲಿ ಬಂದು ಸುಜ್ಞಾನೇಂದ್ರ ತೀರ್ಥರಿಗೆ ಧರ್ಮ ಪ್ರಚಾರಕ್ಕಾಗಿ ನಂಜನಗೂಡಿಗೆ ತೆರಳಲು ಹೇಳುತ್ತಾರೆ ಕನಸಿನಲ್ಲಿ ಬಂದ ರಾಘವೇಂದ್ರ ಸ್ವಾಮಿಗಳು ನಿನ್ನ ಜೊತೆಗೆ ನಾನೂ ಕೂಡ ಶಿಲಾ ರೂಪದಲ್ಲಿ ನಂಜನಗೂಡಿಗೆ ಬರುತ್ತೇನೆ ಎಂಬುದಾಗಿ ಹೇಳುತ್ತಾರೆ

ಮುಮ್ಮಡಿ ಕೃಷ್ಣರಾಜ ಒಡೆಯರು ಸುಜ್ಞಾನೇಂದ್ರ ತೀರ್ಥರ  ಮಹಾನ್ ಭಕ್ತರಾಗಿದ್ದರು ರಾಘವೇಂದ್ರ ಸ್ವಾಮಿಗಳು  ತನ್ನ ಶ್ರೀರಂಗಪಟ್ಟಣದ ಭಕ್ತನೊಬ್ಬನಿಗೆ ಕನಸಿನಲ್ಲಿ ಬಂದು  ನಾನು ಶ್ರೀರಂಗಪಟ್ಟಣದಲ್ಲಿ ಒಬ್ಬ ಅಗಸನ ಜೊತೆಗೆ ಶಿಲೆಯ ರೂಪದಲ್ಲಿ ಇದ್ದೇನೆ ಆ ನನ್ನ ಶಿಲೆಯ ಕಲ್ಲನ್ನು  ನಂಜನಗೂಡಿಗೆ ತಲುಪಿಸಿ ಅಲ್ಲಿ ಪ್ರತಿಷ್ಠಾಪನೆ ಮಾಡುವ ಕೆಲಸವನ್ನು ಮಾಡು ಎಂದು ಭಕ್ತನಿಗೆ ಹೇಳಿದರು ಶ್ರೀ ರಾಘವೇಂದ್ರ ಸ್ವಾಮಿಗಳು ಮುಮ್ಮಡಿ ಕೃಷ್ಣರಾಜ ಒಡೆಯರ  ಕನಸಲ್ಲಿ ಬಂದು  ತನ್ನ ಶಿಲಾ ರೂಪದ ಕಲ್ಲನ್ನು ನಂಜನಗೂಡಿಗೆ ತಲುಪಿಸುವ ಕೆಲಸವನ್ನು ನೀನು ಮಾಡು ಎಂದು ಆಜ್ಞೆ ಮಾಡಿದರು ಶ್ರೀರಂಗ ಪಟ್ಟಣದಲ್ಲಿ ಕಾವೇರಿ ನದಿಯ ದಡದಲ್ಲಿ ಓರ್ವ ಅಗಸ ವಾಸವಾಗಿದ್ದ ಆತ ದೈನಂದಿನ  ಬಟ್ಟೆಗಳನ್ನು ಕಾವೇರಿ ನದಿಯ ತಟದಲ್ಲಿ ಒಗೆಯುತ್ತಿದ್ದ. ಶ್ರೀ ರಾಘವೇಂದ್ರ ಸ್ವಾಮಿಗಳು  ಆ ಅಗಸನ ಕನಸಿನಲ್ಲಿ ಬಂದು ನೀನು ಬಟ್ಟೆಯುವ ಕಲ್ಲಿನ ಶಿಲೆಯಲ್ಲಿ ನನ್ನ ರೂಪವಿದೆ ನೀನು ಬಟ್ಟೆ ಒಗೆಯಲು ಉಪಯೋಗಿಸುವ ಕಲ್ಲನ್ನು ನಾಳೆ ಬರುವ   ಮಹಾರಾಜರಿಗೆ ಕೊಟ್ಟು ಬಿಡು ಎಂದು ಆಜ್ಞೆ ಮಾಡಿದರು

ಮರುದಿನ  ಅಗಸನು ಅವಸರವಾಗಿ ತಾನು ಬಟ್ಟೆ ಒಗೆಯುವ ಕಲ್ಲಿನ ಪಕ್ಕಕ್ಕೆ ಬಂದಾಗ ಬಟ್ಟೆ ಒಗಿಯುವ ಕಲ್ಲಿನಲ್ಲಿ ಓಂಕಾರ ಶಬ್ದ ಜಿನುಗುತ್ತಿತ್ತು , ಬಟ್ಟೆ ಒಗೆಯುವ ಕಲ್ಲನ್ನು ಮೇಲೆತ್ತಿದಾಗ  ಅದರ ಇನ್ನೊಂದು ಭಾಗದಲ್ಲಿ ಯತಿಯೂರ್ವರು ಧ್ಯಾನ ಮಾಡುವ ರೇಖಾ ಚಿತ್ರ ಮೂಡಿತ್ತು ಸುಜ್ಞಾನೇಂದ್ರ ತೀರ್ಥರು ರಾಘವೇಂದ್ರ ಸ್ವಾಮಿಗಳ ಶಿಲಾ ರೂಪವನ್ನು ನಂಜನಗೂಡಿನಲ್ಲಿ ಪ್ರತಿಷ್ಠಾಪಿಸಿದರು ನಂಜನಗೂಡಿನಲ್ಲಿರುವ ಪಂಚ ಬೃಂದಾವನ ಈಗಲೂ ನಾವು ನೋಡಬಹುದು ರಾಘವೇಂದ್ರ ಸ್ವಾಮಿಗಳು ಮೂರು ಜನರಿಗೆ ಏಕಕಾಲದಲ್ಲಿ ಕನಸಿನಲ್ಲಿ ಬಂದು  ತನ್ನ ಪವಾಡವನ್ನು ತೋರಿದರು

  ಪ್ರದೀಪ್‌ ಚಿನ್ಮಯಿ ಆಸ್ಪತ್ರೆ ಕುಂದಾಪುರ

   

Related Articles

error: Content is protected !!