ಕುಂದಾಪುರ : ನಾಡಿನೆಲ್ಲೆಡೆ ಸಡಗರ ಸಂಭ್ರಮದ ನಾಗರಪಂಚಮಿಯನ್ನು ಶ್ರಧ್ಧಾ ಭಕ್ತಿಯಿಂದ ಆಚರಣೆಗೊಂಡಿತು ನಾಗರಾಜನಿಗೆ ಹಿಂಗಾರ ಕೇದಿಗೆ ಹೂ ಸಮರ್ಪಿಸಿ ತನು ಎರೆದು ಭಕ್ತರು ಪುನೀತರಾದರು
ಆಷಾಡ ಮಾಸ ಕಳೆದು ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿಯನ್ನು ನಾಗ ಬನ ನಾಗ ಕ್ಷೇತ್ರಗಳಿಗೆ ತೆರಳುವ ಮೂಲಕ ಭಕ್ತರು ಶ್ರೀ ನಾಗ ದೇವರಿಗೆ ಎಳನೀರು ಮತ್ತು ಹಾಲಿನ ಅಭಿಷೇಕ ಗೈದು ಸಕಲ ಇಷ್ಟಾರ್ಥಗಳನ್ನುಇಡೇರಿಸುವಂತೆ ಭಕ್ತಿಯಿಂದ ಕೈಮುಗಿದು ಪ್ರಾರ್ಥಿಸಿದರು
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಾಗಾರಾಧನ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು ಇದೇ ವೇಳೆ ಇಸ್ರೋ ಚಂದ್ರಯಾನ ಯಶಸ್ವಿಗಾಗಿ ವಿಶೇಷ ಪ್ರಾರ್ಥನೆ ಮಾಡಲಾಯಿತು ಪರವೂರ ಭಕ್ತರು ಕುಟುಂಬದ ನಾಗಬನಕ್ಕೆ ಆಗಮಿಸಿ ತನು ಎರೆದು ಪುನೀತರಾದರು ನಾಗರ ಪಂಚಮಿಯ ಪ್ರಯುಕ್ತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು