Home » 6 ದಿನಗಳ ವೃತ್ತಿ ಕೌಶಲ್ಯದ ವಿಶೇಷ ತರಬೇತಿ
 

6 ದಿನಗಳ ವೃತ್ತಿ ಕೌಶಲ್ಯದ ವಿಶೇಷ ತರಬೇತಿ

by Kundapur Xpress
Spread the love

ಕುಂದಾಪುರ :Naandi Foundation and Mahindra Pride Classroom ಸಹಭಾಗಿತ್ವದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ್ಯದ ವಿಶೇಷ ತರಬೇತಿ ಶಿಬಿರ ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ನೇತೃತ್ವದಲ್ಲಿ ಉದ್ಘಾಟನೆಗೊಂಡಿತು.
ಈ ತರಬೇತಿ ಶಿಬಿರವು ದಿನಾಂಕ 24-08-2023ರಿಂದ 29-08-2023ರ ವರೆಗೆ ಜರುಗಲಿದೆ.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ, ತರಬೇತಿ ಶಿಬಿರದ ಅಗತ್ಯತೆ ಮತ್ತು ಮಹತ್ವದ ಕುರಿತು ಮಾತನಾಡಿದರು. Naandi Foundations ತರಬೇತುದಾರರಾದ ಸುಧೀರ್ ಎಸ್., ಚಂದ್ರಶೇಖರ್, ಶ್ರೇಯಾಸಿ ಪಾಟೀಲ್, ರಾಜಲಕ್ಷ್ಮೀ ಆನಂದನ್ ಉಪಸ್ಥಿತರಿದ್ದರು.
ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿಗಳಾದ ಶ್ರೀ ಮಹೇಶ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಸಿದರು ಮತ್ತು ಶ್ರೀ ರಜತ್ ಬಂಗೇರ ವಂದಿಸಿದರು. ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ವಿನೂತಾ ಹೆಚ್.ಎಸ್. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ರಕ್ಷತ್ ಪ್ರಾರ್ಥಿಸಿದರು.

 

   

Related Articles

error: Content is protected !!